ರಾಯಚೂರು : ನಟ ಪುನೀತ್ ರಾಜ್‍ಕುಮಾರ್ ಅವರ ನಿಧನದಿಂದ ಮನನೊಂದು ಇಬ್ಬರು ಅಭಿಮನಿಗಳು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಸಿಂಧನೂರು ತಾಲ್ಲೂಕಿನ ಹಾರಾಪುರ ಗ್ರಾಮದ ಯುವಕ ಬಸನಗೌಡ ಹಾಗೂ ಯಾಪಲಪರ್ವಿ ಗ್ರಾಮದ ಯುವಕ ಮಹಮ್ಮದ್ ರಫಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಇವರಿಬ್ಬರು ಪವರ್ ಸ್ಟಾರ್ ಅವರ ಅಪ್ಪಟ ಅಭಿಮಾನಿಗಳಾಗಿದ್ದು, ನಿನ್ನೆ ಪುನೀತ್ ಅವರ ನಿಧನದ ಸುದ್ದಿಕೇಳಿ ಆಘಾತಕ್ಕೊಳಗಾಗಿದ್ದಾರೆ. ಇಬ್ಬರು ಮನೆಯಲ್ಲೇ ವಿಷ ಸೇವನೆ ಮಾಡಿದ್ದು, ತಕ್ಷಣ ಅವರನ್ನು ಸಿಂಧನೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸದ್ಯ ಅಭಿಮಾನಿಗಳಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಿಂಧನೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.










