ಬೆಳ್ಳಂಬೆಳಗ್ಗೆ ಹರಿದ ನೆತ್ತರು – ಪೊಲೀಸ್ ಕಾನ್ಸ್ ಟೇಬಲ್ ಮಗನ ಬರ್ಬರ ಹತ್ಯೆ…

74
firstsuddi

ಕಲಬುರಗಿ : ಬೆಳ್ಳಂಬೆಳಗ್ಗೆ ಯುವಕನೋರ್ವನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದಿದೆ.

ಅಭಿಷೇಕ್ (25) ಕೊಲೆಯಾದ ಯುವಕ. ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾನ್ಸ್ ಟೇಬಲ್ ಆಗಿ ಕೆಲಸ ಮಾಡುತ್ತಿರುವ ಚಂದ್ರಕಾಂತ್ ಎಂಬುವರ ಪುತ್ರ. ಅಭಿಷೇಕ್ ನನ್ನು ಸಾವಿರಾರು ಜನರ ಮುಂದೆ ಕೇಂದ್ರ ಬಸ್ ನಿಲ್ದಾಣದಲ್ಲಿ ದುಷ್ಕರ್ಮಿಗಳು ಅಟ್ಟಾಡಿಸಿಕೊಂಡು ಮಾರಕಾಸ್ತ್ರಗಳಿಂದ ಕೊಲೆಗೈದಿದ್ದಾರೆ. ಬಸ್ ನಿಲ್ದಾಣ ಬಳಿಯ ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ.

ಕೊಲೆಯಾದ ಅಭಿಷೇಕ್ ರೌಡಿ ಸೀಟರ್ ಆಗಿದ್ದು, ಕಲಬುರಗಿ ನಗರದ ಅಶೋಕ ನಗರ ಸೇರಿದಂತೆ ಅನೇಕ ಠಾಣೆಗಳಲ್ಲಿ ಕೊಲೆ ಹಾಗೂ ಕೊಲೆ ಯತ್ನ ಕೇಸ್ ಗಳು ಅಭಿಷೇಕ್ ಮೇಲಿದೆ. ಹಳೆ ವೈಷಮ್ಯದ ಹಿನ್ನಲೆ ಕೊಲೆ ನಡೆದಿದೆ ಎನ್ನಲಾಗಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.