ಪೊಲೀಸರನ್ನು ನಾಯಿಗೆ ಹೋಲಿಸಿದ ಆರೋಪ – ಗೃಹ ಸಚಿವರ ವಿರುದ್ಧ ದೂರು ದಾಖಲು…

103
firstsuddi

ಚಿಕ್ಕಮಗಳೂರು : ಪೊಲೀಸರನ್ನು ನಾಯಿಗೆ ಹೋಲಿಸಿದ ಆರೋಪದ ಹಿನ್ನೆಲೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ದೂರು ದಾಖಲಾಗಿದೆ. ಜಿಲ್ಲೆಯ ಕೊಪ್ಪ ಪೊಲೀಸ್ ಠಾಣೆಯಲ್ಲಿ ರೈತ ಸಂಘ ಮತ್ತು ಹಸಿರು ಸೇನೆ ದೂರು ದಾಖಲಿಸಿದೆ.

ಗೃಹ ಸಚಿವರ ಹೇಳಿಕೆಯಿಂದ ಸಾರ್ವಜನಿಕರಿಗೆ ಪೊಲೀಸರ ಮೇಲೆ ಗೌರವ ಕಡಿಮೆಯಾಗುತ್ತದೆ. ಸಮಾಜದ ಶಾಂತಿ, ಮಕ್ಕಳು-ಮಹಿಳೆಯರ ರಕ್ಷಣೆಯಲ್ಲಿ ಪೊಲೀಸರದ್ದು ಪ್ರಮುಖ ಪಾತ್ರ. ಅಂತಹ ಪೊಲೀಸರನ್ನು ನಾಯಿಗೆ ಹೋಲಿಸಿರುವುದು ಖಂಡನೀಯ ಎಂದು ರೈತ ಮುಖಂಡ ನವೀನ್ ಕುರುವಾನೆ ಎಂಬುವವರು ದೂರು ದಾಖಲಿಸಿದ್ದಾರೆ.