ಮಂಗಳೂರು : ಮನೆಯವರಿಗೆ ತಲವಾರ್ ತೋರಿಸಿ ಜಾನುವಾರು ಕಳ್ಳತನ ಮಾಡಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಉಳ್ಳಾಲ ನಿವಾಸಿ ಮೊಹಮ್ಮದ್ ಸಲೀಂ(32), ಉಳ್ಳಾಲ ಮಾಸ್ತಿಕಟ್ಟೆ ನಿವಾಸಿ ಮೊಹಮ್ಮದ್ ತಂಝಿಲ್(25), ಮೊಹಮ್ಮದ್ ಅಫ್ರೀನ್, ಉಳ್ಳಾಲ ಕೋಡಿ ನಿವಾಸಿ ಮೊಹಮ್ಮದ್ ಇಕ್ಬಾಲ್(24), ಎಂದು ಗುರುತಿಸಲಾಗಿದೆ.
ಕೂಳೂರು ಮಲರಾಯ ದೇವಸ್ಥಾನ ಬಳಿಯ ನಿವಾಸಿ ಉಮೇಶ್ ಎಂಬವರಿಗೆ ಸೇರಿದ ಹಸುಗಳನ್ನು ಅವರು ಮನೆಯ ಪಕ್ಕದಲ್ಲೇ ಕಟ್ಟಿ ಹಾಕಿದ್ದರು. ನಿನ್ನೆ ನಸುಕಿನ ಜಾವ 4.30 ಸುಮಾರಿಗೆ ಕಪ್ಪು ಬಣ್ಣದ ಸ್ಕಾರ್ಪಿಯೋ ವಾಹನದಲ್ಲಿ ಆಗಮಿಸಿದ ಆಗಂತುಕರು ಮೂರು ದನಗಳನ್ನು ಸ್ಕಾರ್ಪಿಯೋ ವಾಹನಕ್ಕೆ ಬಲವಂತವಾಗಿ ತುಂಬಿಸಿದ್ದರು.ಈ ಸಂದರ್ಭದಲ್ಲಿ ಮನೆಯವರಿಗೆ ತಿಳಿದು ಅವರು ಬೊಬ್ಬೆಯಿಟ್ಟು ಆಗಮಿಸಿದಾಗ ತಲವಾರ್ ತೋರಿಸಿ ಬೆದರಿಕೆ ಒಡ್ಡಿ ಪರಾರಿಯಾಗಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಇಂದು ನಾಲ್ವರೂ ಆರೋಪಿಗಳನ್ನು ಬಂಧಿಸಿದ್ದು, ಕೃತ್ಯಕ್ಕೆ ಬಳಸಿರುವ ವಾಹನವನ್ನು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










