ಕಮಿಷನ್ ನೀಡುವಂತೆ ಪಿಡಿಒಗಳಿಗೆ ಕಿರುಕುಳ ನೀಡುತ್ತಿದ್ದ ಇಒ ಅಮಾನತು…

94
firstsuddi

ಮಂಡ್ಯ : ಪಿಡಿಒಗಳಿಗೆ ಹಣ ನೀಡುವಂತೆ ಪೀಡಿಸುವುದರ ಜೊತೆಗೆ ಕಿರುಕುಳ ನೀಡುತ್ತಿದ್ದ ಆರೋಪದ ಮೇಲೆ ಶ್ರೀರಂಗಪಟ್ಟಣದ ತಾಲೂಕು ಪಂಚಾಯತ್ ಇಒ ಬೈರಪ್ಪ ಅವರನ್ನು ಅಮಾನತು ಮಾಡಲಾಗಿದೆ.

ಕಾಮಗಾರಿ ಹಾಗೂ ಯೋಜನೆಗಳ ಬಿಲ್ ಮಂಜೂರು ಮಾಡಲು ಶೇ. 4ರಿಂದ ಶೇ.20 ಪರ್ಸಂಟೇಜ್ ಹಣಕ್ಕಾಗಿ ಇಒ ಪೀಡಿಸುತ್ತಿದ್ದರಂತೆ. ಒಂದು ವೇಳೆ ಪಿಡಿಒಗಳು ಹಣ ನೀಡಲಿಲ್ಲ ಎಂದರೆ ಬಿಲ್ ಪಾಸ್ ಆಗದ ರೀತಿಯಲ್ಲಿ ಇಒ ವರ್ತನೆ ಮಾಡುತ್ತಿದ್ದರಂತೆ. ಪಿಡಿಒಗಳಿಗೆ
ಕಿರುಕುಳ ನೀಡುತ್ತಿದ್ದ ಆಡಿಯೋ ಮತ್ತು ವೀಡಿಯೋ ವೈರಲ್ ಆಗಿದೆ.

ಈ ರೀತಿಯ ದೌರ್ಜನ್ಯಕ್ಕೆ ಬೇಸತ್ತು ಪಿಡಿಒಗಳು ಮಂಡ್ಯ ಜಿಲ್ಲಾ ಪಂಚಾಯತಿ ಸಿಇಒ ದಿವ್ಯಾ ಪ್ರಭು ಮತ್ತು ಪಂಚಾಯತ್ ರಾಜ್ಯ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿದ್ದರು. ಈ ಆರೋಪ ಹಿನ್ನೆಲೆ ಇಒ ಅವರನ್ನು ಅಮಾನತು ಮಾಡಲಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಪಂಚಾಯಿತಿ ಸಿಇಒ ದಿವ್ಯ ಪ್ರಭು ಅವರು, ಈ ಬಗ್ಗೆ ಪಿಡಿಒಗಳು ದೂರು ನೀಡಿದ್ದಾರೆ. ನಾವು ಜಿಲ್ಲಾ ಮಟ್ಟದ ಅಧಿಕಾರಿಗಳ ತಂಡ ರಚಿಸಿದ್ದೇವೆ. ಮೇಲ್ನೋಟಕ್ಕೆ ಹಣಕ್ಕಾಗಿ ಇಒ ಒತ್ತಡ ಹಾಕಿದ್ದಾರೆ ಎಂದು ವರದಿ ಕೊಟ್ಟಿದ್ದಾರೆ. ಆಡಿಯೋ-ವಿಡಿಯೋ ಸಾಕ್ಷಿ ಎಲ್ಲವನ್ನೂ ಸೇರಿಸಿ ಸರ್ಕಾರಕ್ಕೆ ವರದಿ ಕಳುಹಿಸಲಾಗುವುದು. ಸರ್ಕಾರವೇ ಕ್ರಮ ಜರುಗಿಸುತ್ತೆ ಎಂದಿದ್ದಾರೆ.