ಮಚ್ಚಿನಿಂದ ಕೊಚ್ಚಿ ಪತ್ನಿ, ಅತ್ತೆಯ ಬರ್ಬರ ಹತ್ಯೆ…

104
firstsuddi

ಬೆಂಗಳೂರು : ವ್ಯಕ್ತಿಯೋರ್ವ ಪತ್ನಿ ಹಾಗೂ ಅತ್ತೆಯನ್ನು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಗೋವಿಂದರಾಜ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಸಾವಿತ್ರಿ ಹಾಗೂ ಸರೋಜಮ್ಮ ಮೃತ ದುರ್ದೈವಿಗಳು. ರವಿಕುಮಾರ್ ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಮೂಲತಃ ಶಿವಮೊಗ್ಗದ ತೀರ್ಥಹಳ್ಳಿಯ ರವಿಕುಮಾರ್ ಹಲವು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ. 20 ವರ್ಷಗಳ ಹಿಂದೆ ಸಾವಿತ್ರಿಯೊಂದಿಗೆ ಮದುವೆ ಮಾಡಿಕೊಂಡಿದ್ದ. ಆದರೆ ಹೆಂಡತಿಯ ಅನೈತಿಕ ಸಂಬಂಧಕ್ಕೆ ಬೇಸತ್ತಿದ್ದ ರವಿಕುಮಾರ್, ಪದೇ ಪದೇ ಹೆಂಡತಿಗೆ ಬುದ್ಧಿವಾದ ಹೇಳಿದ್ದನು.

ಆದರೂ ಹೆಂಡತಿ ತನ್ನ ಚಾಳಿಯನ್ನ ತಿದ್ದುಕೊಳ್ಳದ ಹಿನ್ನೆಲೆ ಮೊದಲು ವಾಸ ಮಾಡುತ್ತಿದ್ದ ಮನೆಯನ್ನು ಖಾಲಿ ಮಾಡಿ ಬೇರೆ ಕಡೆ ಮನೆ ಮಾಡಿದನು. ಬಳಿಕವೂ ಹೆಂಡತಿ ತನ್ನ ಹಳೇ ಗೆಳಯನನ್ನು ಬಿಟ್ಟಿರಲಿಲ್ಲ. ಇಂದು ಬೆಳಗ್ಗೆ ಮಕ್ಕಳಿಬ್ಬರನ್ನು ಶಾಲೆಗೆ ಕಳುಹಿಸಿ ಪತ್ನಿಯೊಂದಿಗೆ ಗಲಾಟೆ ತೆಗೆದಿದ್ದನಂತೆ. ಈ ವೇಳೆ ಜಗಳ ವಿಕೋಪಕ್ಕೆ ತಿರುಗಿ ಮನೆಯಲ್ಲಿದ್ದ ಎಳನೀರು ಕೊಚ್ಚುವ ಮಚ್ಚಿನಿಂದ ಪತ್ನಿ ಸಾವಿತ್ರಿ ಮತ್ತು ಆಕೆಯ ತಾಯಿ ಸರೋಜಮ್ಮ ಇಬ್ಬರನ್ನೂ ಕೊಚ್ಚಿ ಕೊಂದಿದ್ದಾನೆ. ದುಷ್ಕೃತ್ಯದ ಬಳಿಕ ಆರೋಪಿ ಗೋವಿಂದರಾಜನಗರ ಪೊಲೀಸರ ಮುಂದೆ ಹಾಜರಾಗಿ ಹತ್ಯೆ ಬಗ್ಗೆ ಮಾಹಿತಿ ನೀಡಿ ಶರಣಾಗಿದ್ದಾನೆ.