ಜಾಯಿಂಟ್ ವ್ಹೀಲ್ ತುಂಡಾಗಿ ಮಕ್ಕಳಿಗೆ ಗಾಯ…

70
firstsuddi

ಮಂಗಳೂರು : ಉಳ್ಳಾಲದಲ್ಲಿ ನಡೆಯುತ್ತಿರುವ ಪಂಚವಾರ್ಷಿಕ ಉರೂಸ್ ಕಾರ್ಯಕ್ರಮದಲ್ಲಿ ಜಾಯಿಂಟ್ ವ್ಹೀಲ್ ತುಂಡಾಗಿ ನಾಲ್ವರು ಮಕ್ಕಳು ಗಾಯಗೊಂಡಿರುವ ಘಟನೆ ಕಳೆದ ರಾತ್ರಿ ನಡೆದಿದೆ.

ಉರೂಸ್ ಪ್ರಯುಕ್ತ ದರ್ಗಾ ಸಂದರ್ಶನಕ್ಕೆಂದು ಬಂದಿದ್ದ ಕೇರಳ ಮೂಲದ ನಾಲ್ವರು ಮಕ್ಕಳು ಸಂತೆಯಲ್ಲಿದ್ದ ಜಾಯಿಂಟ್ ವ್ಹೀಲ್ ನಲ್ಲಿ ಆಟವಾಡುತ್ತಿದ್ದರು. ಈ ವೇಳೆ, ಏಕಾಏಕಿ ವ್ಹೀಲ್ ಜಾಯಿಂಟ್ ತಪ್ಪಿದ ಪರಿಣಾಮ ಮಕ್ಕಳು ಕೆಳಕ್ಕೆ ಬಿದ್ದು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆಯಿಂದ ಕೆಲಕಾಲ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಕೂಡಲೇ ಸ್ಥಳಕ್ಕಾಗಮಿಸಿದ ಉಳ್ಳಾಲ ಠಾಣಾ ಪೊಲೀಸರು ಪರಿಶೀಲನೆ ನಡೆಸಿ, ಪರಿಸ್ಥಿತಿ ನಿಯಂತ್ರಿಸಿದರು.