ಕೊಲೆ ಕೇಸ್ – ಕೆ.ಆರ್.ಪೇಟೆ ಕ್ಷೇತ್ರದ ಮಾಜಿ ಶಾಸಕರ ಪುತ್ರ ಅರೆಸ್ಟ್…

84
firstsuddi

ಮಂಡ್ಯ : ಕೊಲೆ ಪ್ರಕರಣ ಸಂಬಂಧ ಜಿಲ್ಲೆಯ ಕೆ.ಆರ್. ಪೇಟೆ ಕ್ಷೇತ್ರದ ಮಾಜಿ ಶಾಸಕನ ಪುತ್ರನನ್ನು ಅರೆಸ್ಟ್ ಮಾಡಲಾಗಿದೆ.

ರೈಲ್ ಫುಲ್ಲಿಂಗ್ ವಿಚಾರವಾಗಿ ಫೆಬ್ರವರಿ 7ರಂದು ಕೊಳ್ಳೇಗಾಲದ ಸಲೀಂ ಎಂಬಾತನ ಹತ್ಯೆಯಾಗಿತ್ತು. 40 ವರ್ಷದ ಸಲೀಂ ನನ್ನು ಕೊಲೆ ಮಾಡಿದ್ದ ಗುಂಪೊಂದು ಆತನನ್ನು ಮಳವಳ್ಳಿಯ ಪಡಂತಹಳ್ಳಿಯ ರಸ್ತೆ ಬದಿ ಎಸೆದು ಹೋಗಿತ್ತು. ಪ್ರಕರಣವನ್ನು ಮುಚ್ಚಿ ಹಾಕಲು ಸರ್ಕಲ್ ಇನ್ಸ್ ಪೆಕ್ಟರ್ ಒಬ್ಬರು ಹುನ್ನಾರ ನಡೆಸಿದ್ದಾರೆ ಎಂಬ ಶಂಕೆಯೂ ವ್ಯಕ್ತವಾಗಿತ್ತು.

ಸಲೀಂನನ್ನು ಕೊಲೆ ಮಾಡಿದ್ದ ತಂಡದ ಎಡವಟ್ಟಿನಿಂದಾಗಿ ಪ್ರಕರಣ ಬಯಲಿಗೆ ಬಂದಿದೆ. ಶವವನ್ನು ಬೆಳಕವಾಡಿ ಠಾಣೆ ವ್ಯಾಪ್ತಿ ಬದಲಿಗೆ ಮಳವಳ್ಳಿ ಗ್ರಾಮಾಂತರ ಪರದಿಯಲ್ಲಿ ಶವವನ್ನು ಬಿಸಾಡಿದ್ದರು. ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ ಮಳವಳ್ಳಿ ಗ್ರಾಮಾಂತರ ಠಾಣೆ ಇನ್ಸ್ ಪೆಕ್ಟರ್ ರಾಜೇಶ್ ಹಾಗೂ ತಂಡ ಸೂಕ್ಷ್ಮವಾಗಿ ತನಿಖೆ ನಡೆಸಿ ಮಾಜಿ ಶಾಸಕ ಕೆಬಿ ಚಂದ್ರಶೇಖರ್ ಪುತ್ರ ಶ್ರೀಕಾಂತ್ ನನ್ನು ಬಂಧಿಸಿದ್ದಾರೆ.