ಭಾರತದ ಪ್ಯಾಲೆಸ್ಟೈನ್ ರಾಯಭಾರಿ ನಿಗೂಢ ಸಾವು…

59
firstsuddi

ನವದೆಹಲಿ : ಪ್ಯಾಲೆಸ್ಟೈನ್ ನಲ್ಲಿ ಭಾರತದ ರಾಯಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಮುಕುಲ್ ಆರ್ಯ ಅವರ ಮೃತದೇಹ ನಿನ್ನೆ ರಾಮಲ್ಲಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯಲ್ಲಿ ಪತ್ತೆಯಾಗಿದೆ.

2008ರ ಬ್ಯಾಚ್ ನ ಭಾರತೀಯ ವಿದೇಶಾಂಗ ಸೇವೆಯ ಅಧಿಕಾರಿಯಾಗಿರುವ ಆರ್ಯ, ಈ ಮೊದಲು ಕಾಬೂಲ್ ಮತ್ತು ಮಾಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿಗಳಲ್ಲಿ ಕೆಲಸ ಮಾಡಿದ್ದರು. ಆರ್ಯ ಅವರ ಸಾವಿಗೆ ಕಾರಣ ತಿಳಿದು ಬಂದಿಲ್ಲ.

ಮುಕುಲ್ ಆರ್ಯ ಅವರ ನಿಧನದ ಕುರಿತು ಟ್ವೀಟ್ ಮಾಡಿರುವ ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್, ರಮಲ್ಲಾದಲ್ಲಿ ಭಾರತೀಯ ರಾಯಭಾರಿಯಾಗಿರುವ ಮುಕುಲ್ ಆರ್ಯ ಅವರ ಸಾವು ತೀವ್ರ ಆಘಾತ ತಂದಿದೆ. ಆರ್ಯ ಕುಟುಂಬಕ್ಕೆ ಅವರ ನಿಧನದ ನೋವು ಮರೆಸುವ ಶಕ್ತಿಯನ್ನ ದೇವರು ಕರುಣಿಸಲಿ ಎಂದು ಸಂತಾಪ ಸೂಚಿಸಿದ್ದಾರೆ.