ಕೊಟ್ಟಿಗೆಹಾರ : ಸರ್ಕಾರದಿಂದ ಜಿಲ್ಲೆಯ ಕೃಷಿ ರೈತರಿಗೆ ಈ ಬಾರಿ ಉತ್ತಮ ಕೊಡುಗೆ ನೀಡಲಾಗಿದೆ ಎಂದು ಎಂದು ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಹೇಳಿದರು.
ಕೊಟ್ಟಿಗೆಹಾರದ ತರುವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಕಟ್ಟಡಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮಲೆನಾಡಿನ ಬಿಪಿಎಲ್, ಎಪಿಎಲ್ ಕಾರ್ಡುದಾರರಿಗೆ 1.30 ಲಕ್ಷ ವಾರ್ಷಿಕ ಒಂದೇ ವರಮಾನ ಮಾಡುವಂತೆ ಕೂಡ ಆಗ್ರಹಿಸಲಾಗಿದೆ. ಸರ್ಕಾರದಿಂದ ರೂ 60 ಲಕ್ಷ ಲೋಕೋಪಯೋಗಿ ರಸ್ತೆಗೆ, ಎಸ್ಸಿಪಿಟಿಗೆ 30 ಕೋಟಿ, ಆರ್ಡಿಪಿಆರ್ಗೆ 50ಕೋಟಿ ಅನುದಾನ ನೀಡಲಾಗಿದೆ. ಕೃಷಿ ರೈತರಿಗೆ 10 ಗಂಟೆಗಳ ಕಾಲ ಪಂಪ್ಸೆಟ್ಗೆ ತ್ರಿಪೇಸ್ ವಿದ್ಯುತ್ ಸರಬರಾಜಿಗೆ ಅವಕಾಶ ನೀಡಲಾಗಿದೆ. ಇದರ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್ ನೂತನ ಕಟ್ಟಡಗಳನ್ನು ಉದ್ಘಾಟಿಸಿ ಮಾತನಾಡಿ, ರಾಜ್ಯದ ಬಜೆಟ್ನಲ್ಲಿ ಜಿಲ್ಲೆಗೆ ಉತ್ತಮ ಕೊಡುಗೆ ನೀಡಿದೆ. ಹೆಚ್ಚಿನ ಆದ್ಯತೆ ಕೃಷಿ ರೈತರ ನೀರಾವರಿ ಸಮಸ್ಯೆಗೆ ನೀಡಲಾಗಿದೆ. ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆ ಕಾಟದಿಂದ ಬೆಳೆ ಹಾನಿಯನ್ನು ತಪ್ಪಿಸಲು ಆನೆ ಬ್ಯಾರಿಕೇಡ್ ನಿರ್ಮಾಣಕ್ಕೆ ರೂ 100 ಕೋಟಿ ಅನುದಾನ ಘೋಷಣೆ ಮಾಡಲಾಗಿದೆ. ಅಭಿವೃದ್ದಿಯ ನಿಟ್ಟಿನಲ್ಲಿ ಪಕ್ಷಬೇಧ ಮಾಡದೇ ಜನರಿಗೆ ಸೌಲಭ್ಯ ಒದಗಿಸುವುದು ನಮ್ಮ ಆಧ್ಯ ಕರ್ತವ್ಯವಾಗಿದೆ. ಅಧಿಕಾರಿಗಳು ಜನರಿಗೆ ಸ್ಪಂದಿಸುವ ಕಾರ್ಯ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಕೆಡಿಪಿ ಸದಸ್ಯ ಬಿ.ಎಂ.ಭರತ್, ತರುವೆ ಗ್ರಾ.ಪಂ ಅಧ್ಯಕ್ಷೆ ರವಿಕಲಾ ಪೈ, ಉಪಾಧ್ಯಕ್ಷ ಬಿ.ಆರ್.ರಮೇಶ್, ಸದಸ್ಯೆ ಲಲಿತ, ಪದ್ಮ, ಬಿ.ಎಂ.ಸತೀಶ್, ಸ್ವರೂಪ, ಸುಶೀಲ, ಸ್ಮಿತಾ, ಎ.ಎನ್.ರಘು, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಡಿ.ಡಿ.ಪ್ರಕಾಶ್, ತಾ.ಪಂ.ಮಾಜಿ ಅಧ್ಯಕ್ಷ ಕೆ.ಸಿ.ರತನ್, ಪಿಡಿಒ ಕೆ.ವಿ.ಶಾರದಾ, ಮುಖಂಡರಾದ ಟಿ.ಎಂ.ಗಜೇಂದ್ರ, ವೇಣುಗೋಪಾಲ್ ಪೈ, ನಿವೃತ್ತ ಸಬ್ಇನ್ಸ್ಪೆಕ್ಟರ್ ಮಂಜಯ್ಯ, ಸಂಜಯ್ಗೌಡ ಹಾಗೂ ಗ್ರಾಮಸ್ಥರು ಇದ್ದರು.










