ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ ತಾಯಿ ಹೃದಯಾಘಾತದಿಂದ ಸಾವು…

64
firstsuddi

ಬೆಳಗಾವಿ : ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ ಮಹಿಳೆಯೊಬ್ಬರು ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಖಾನಾಪೂರ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

ಖಾನಾಪುರ ತಾಲೂಕಿನ ಗಂಗವಾಳಿ ಗ್ರಾಮದ ನಿವಾಸಿ ಉಜ್ವಲಾ ಅರುಣ್ ಶಿಂಧೆ(24) ಮೃತಪಟ್ಟ ಮಹಿಳೆ. ಉಜ್ವಲಾ ಅವರು ನಿನ್ನೆ ತೀವ್ರ ಹೆರಿಗೆ ನೋವಿನಿಂದಾಗಿ ಖಾನಾಪೂರದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಪರೀಕ್ಷೆಯ ವೇಳೆ ಆಕೆಯ ಹೊಟ್ಟೆಯಲ್ಲಿ ಅವಳಿ ಮಕ್ಕಳಿರುವುದು ಗೊತ್ತಾಗಿದೆ. ಹೀಗಾಗಿ ವೈದ್ಯರು ಕೂಡಲೇ ಹೆರಿಗೆ ಮಾಡಿಸಿದ್ದರು.

ಹೆರಿಗೆಯ ಬಳಿಕ ನವಜಾತ ಶಿಶುಗಳ ಜನನವಾಗಿದೆ. ಆದರೆ ಹೆರಿಗೆ ಸಮಯದಲ್ಲಿ ತೀವ್ರ ರಕ್ತಸ್ರಾವದಿಂದ ನಿತ್ರಾಣಗೊಂಡಿದ್ದ ಉಜ್ವಲಾ ಅವರು ಹೃದಯಾಘಾತಕ್ಕೀಡಾಗಿ ಮೃತಪಟ್ಟಿದ್ದಾರೆ. ಶಿಶುಗಳ ಆರೋಗ್ಯ ಪರೀಕ್ಷಿಸಿದ ವೈದ್ಯರು ಸಮರ್ಪಕವಾಗಿ ಬೆಳವಣಿಗೆ ಹೊಂದಿರದ ಕಾರಣ ಬೆಳಗಾವಿ ಜಿಲ್ಲಾಸ್ಪತ್ರೆಗೆ ರವಾನಿಸಿ ಅಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸದ್ಯ ನವಜಾತ ಶಿಶುಗಳು ಚೇತರಿಸಿಕೊಳ್ಳುತ್ತಿವೆ ಎಂದು ಮೂಲಗಳಿಂದ ತಿಳಿದುಬಂದಿದೆ.