ಚಿಕ್ಕಮಗಳೂರು : ನಗರದಲ್ಲಿ ಬೆಳ್ಳಂಬೆಳಗ್ಗೆ ಎಸಿಬಿ ದಾಳಿ ಮಾಡಿದ್ದು, ಪಿಡಬ್ಲೂಡಿ ಎಇಇ ಗವಿರಂಗಪ್ಪ ಮನೆ ಮೇಲೆ ಎಸಿಬಿ ಅಧಿಕಾರಿಗಳಿಂದ ದಾಳಿ ಮಾಡಲಾಗಿದೆ.
ನಗರದ ಗಾಂಧಿನಗರ ಬಡಾವಣೆಯಲ್ಲಿರುವ ಪಿಡಬ್ಲೂಡಿ ಎಇಇ ಗವಿರಂಗಪ್ಪ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ದಾಳಿ ವೇಳೆ ಅಕ್ರಮ ಸಂಪತ್ತು ಪತ್ತೆಯಾಗಿದೆ. ಈವರೆಗೆ ಸಿಕ್ಕಿರುವ 750 ಗ್ರಾಂ ಚಿನ್ನದ ಗಟ್ಟಿ, 900 ಗ್ರಾಂ ಬೆಳ್ಳಿ, 2.74 ಲಕ್ಷ ರೂ.ಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇನ್ನು ಕೂಡ ಅಧಿಕಾರಿಗಳಿಂದ ದಾಳಿ ಮುಂದುವರೆದಿದೆ.










