ಸೋನಂ ಕಪೂರ್ ಮನೆಯಲ್ಲಿ 2.4 ಕೋಟಿ ಕಳ್ಳತನ – ಮಹಿಳಾ ನರ್ಸ್ ಸೇರಿ ಇಬ್ಬರ ಬಂಧನ…

59
firstsuddi

ನವದೆಹಲಿ: ಬಾಲಿವುಡ್ ನಟಿ ಸೋನಂ ಕಪೂರ್ ಅವರ ಮನೆಯಲ್ಲಿ 2.4 ಕೋಟಿ ನಗದು ಮತ್ತು ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ನರ್ಸ್ ಸೇರಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಫೆಬ್ರವರಿ 11ರಂದು ನಟಿ ಸೋನಂ ಕಪೂರ್ ಮತ್ತು ಉದ್ಯಮಿ ಆನಂದ್ ಅಹುಜಾ ಅವರ ದೆಹಲಿ ನಿವಾಸದಲ್ಲಿ 2.4 ಕೋಟಿ ನಗದು ಮತ್ತು ಆಭರಣಗಳನ್ನು ದರೋಡೆ ಮಾಡಲಾಗಿತ್ತು. ಸೋನಂ ಮನೆಯವರಿಗೆ ತಡವಾಗಿ ವಿಷಯ ಗೊತ್ತಾಗಿತ್ತು. ಬಳಿಕ ಫೆಬ್ರವರಿ 23ರಂದು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ಕುರಿತಂತೆ ಎಫ್ ಐಆರ್ ದಾಖಲಿಸಿಕೊಂಡ ಪೊಲೀಸರು, ತನಿಖೆ ಆರಂಭಿಸಿದ್ದರು.

ಮನೆಯಲ್ಲಿ ಸೆಕ್ಯೂಟಿರಿ ಗಾರ್ಡ್ , ಸಿಸಿಟಿವಿ ಹಾಗೂ ಇತರ ಕೆಲಸಗಾರರು ಇರುವಾಗ, ಅಷ್ಟೊಂದು ಬೆಲೆ ಬಾಳುವ ಬಂಗಾರವನ್ನು ಯಾರು  ತೆಗೆದುಕೊಂಡು ಹೋಗುತ್ತಾರೆ ಎಂಬ ತಲೆನೋವು ಪೊಲೀಸರಿಗೆ ಶುರುವಾಗಿತ್ತು. ಈ ವೇಳೆ ಮನೆಯವರನ್ನು ವಿಚಾರಣೆಗೊಳಪಡಿಸಿದಾಗ ಸೋನಂ ಕಪೂರ್ ಅತ್ತೆಯನ್ನು ನೋಡಿಕೊಳ್ಳುತ್ತಿದ್ದ ನರ್ಸ್ ಅಪರ್ಣ ರೌತ್ ವಿಲ್ಸನ್ ಮತ್ತು ಆಕೆಯ ಪತಿ ನರೇಶ್ ಕುಮಾರ್ ಸಾಗರ್ ಕಳ್ಳತನ ಮಾಡಿದ್ದಾರೆ ಎಂದು ಗೊತ್ತಾಗಿದೆ. ಇದೀಗ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.