ದೇಶದ ಪ್ರಗತಿಗಾಗಿ ಅಂಬೇಡ್ಕರ್ ಅವರು ಅಪಾರ ಸೇವೆ ಸಲ್ಲಿಸಿದ್ದಾರೆ : ಮೋದಿ.

72
firstsuddi

ನವದೆಹಲಿ : ಇಂದು ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ 131ನೇ ಜಯಂತಿ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಗೌರವ ಸಲ್ಲಿಸಿದ್ದಾರೆ.

ಪ್ರಧಾನಿ ಮೋದಿ ಅವರು ಟ್ವೀಟ್ ಮಾಡಿದ್ದು, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಜಯಂತಿಗೆ ನನ್ನ ನಮನಗಳು. ಭಾರತದ ಪ್ರಗತಿಗಾಗಿ ಅವರು ಅಪಾರ ಸೇವೆ ಸಲ್ಲಿಸಿದ್ದಾರೆ. ನಮ್ಮ ದೇಶಕ್ಕಾಗಿ ಅವರು ಕಂಡ ಕನಸನ್ನು ನಾವು ನನಸಾಗಿಸಲು ಬದ್ಧರಾಗುವ ದಿನ ಬಂದಿದೆ ಎಂದು ತಿಳಿಸಿದ್ದಾರೆ.

ಅಂಬೇಡ್ಕರ್ ಜಯಂತಿಯಂದು ಬಾಬಾಸಾಹೇಬರಿಗೆ ಗೌರವ ಪೂರ್ವಕ ನಮನಗಳು! ಸಾಮಾಜಿಕ ನ್ಯಾಯದ ಪ್ರಬಲ ವಕೀಲರಾದ ಬಾಬಾಸಾಹೇಬರು ಸಂವಿಧಾನದ ಶಿಲ್ಪಿಯಾಗಿ ಆಧುನಿಕ ಭಾರತಕ್ಕೆ ಅಡಿಪಾಯ ಹಾಕಿದರು. ‘ಮೊದಲು ಭಾರತೀಯ, ನಂತರವೂ ಭಾರತೀಯ ಮತ್ತು ಕೊನೆಯಲ್ಲೂ ಭಾರತೀಯ’ ಎಂಬ ತತ್ವವನ್ನು ಹಾಕಿಕೊಟ್ಟರು. ಇದಕ್ಕೆ ಬದ್ಧವಾಗಿ ಎಲ್ಲರನ್ನೂ ಒಳಗೊಳ್ಳುವ ಸಮಾಜವನ್ನು ನಿರ್ಮಿಸುವಲ್ಲಿ ನಮ್ಮ ಪಾತ್ರವನ್ನು ಮಾಡೋಣ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿ, ಬಾಬಾಸಾಹೇಬ್ ಅಂಬೇಡ್ಕರ್ ಅವರ 131 ನೇ ಜಯಂತಿಗೆ ನಮನಗಳು. ಭಾರತಕ್ಕೆ ಬಲವಾದ ಶಕ್ತಿಯ ಆಧಾರ ಸ್ತಂಭವಾದ ನಮ್ಮ ಪವಿತ್ರ ಸಂವಿಧಾನವನ್ನು ನೀಡಿದ ಬಾಬಾಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್ ಅವರಿಗೆ ನನ್ನ ನಮನಗಳು ಎಂದು ಗೌರವ ಸಮರ್ಪಿಸಿದ್ದಾರೆ.