ಲಕ್ನೋ : ದೇಶದೆಲ್ಲೆಡೆ ಧ್ವನಿವರ್ಧಕ ವಿಚಾರ ಭಾರೀ ಸದ್ದು ಮಾಡುತ್ತಿದೆ. ಈಗಾಗಲೇ ಅತಿ ನಿಯಮಿತಿ ಡೆಸಿಬಲ್ ಗಿಂತ ಹೆಚ್ಚಿನ ಧ್ವನಿವರ್ಧಕಗಳನ್ನು ತೆರುವು ಮಾಡುವಂತೆ ಸುಪ್ರೀಂ ಸೂಚಿಸಿದೆ. ಈ ನಡುವೆ ಅರ್ಜಿದಾರರೊಬ್ಬರು ಮಸೀದಿಗಳಲ್ಲಿ ಆಜಾನ್ ವೇಳೆ ಧ್ವನಿವರ್ಧಕ ಅಳವಡಿಸಬೇಕು ಎಂಬ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿದೆ.
ನ್ಯಾಯಮೂರ್ತಿ ವಿವೇಕ್ ಕುಮಾರ್ ಬಿರ್ಲಾ ಹಾಗೂ ನ್ಯಾಯಮೂರ್ತಿ ವಿಕಾಸ್ ಅವರಿದ್ದ ನ್ಯಾಯಪೀಠವು, ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ಅಳವಡಿಸುವುದು ಮೂಲಭೂತ ಹಕ್ಕು ಅಲ್ಲ. ಹಾಗೇ ಮಸೀದಿಗಳಲ್ಲಿ ಧ್ವನಿ ವರ್ಧಕ ಬಳಕೆ ಮಾಡುವುದು ಸಾಂವಿಧಾನಿಕ ಹಕ್ಕು ಅಲ್ಲ ಎಂದು ಕಾನೂನು ಸ್ಪಷ್ಟವಾಗಿ ಹೇಳುತ್ತದೆ ಎಂದು ಹೇಳಿದೆ.
2021ರ ಡಿಸೆಂಬರ್ 3ರಂದು ಬದೌನ್ ಜಿಲ್ಲೆಯ ಬಿಸೌಲಿ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್ ಡಿಎಂ)ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿದ್ದ ಮುಸ್ಲಿಂ ಮುಖಂಡ ಇರ್ಫಾನ್ ಆಜಾನ್ ಗಾಗಿ ಧೋರನ್ ಪುರ ಗ್ರಾಮದ ನೂರಿ ಮಸೀದಿಯಲ್ಲಿ ಧ್ವನಿವರ್ಧಕಗಳನ್ನು ಅಳವಡಿಸಲು ಅನುಮತಿ ಕೋರಿದ್ದರು.










