ರಾಂಚಿ : ಜಾರ್ಖಂಡ್ ನ ಜೆಮ್ಶೆಡ್ಪುರದಲ್ಲಿರುವ ಟಾಟಾ ಉಕ್ಕು ಕಾರ್ಖಾನೆಯ ಘಟಕದಲ್ಲಿ ಇಂದು ಬೆಳಗ್ಗೆ ಭೀಕರ ಸ್ಫೋಟ ಸಂಭವಿಸಿದೆ.
ಕೋಕ್ ಪ್ಲಾಂಟ್ ನ ಬ್ಯಾಟರಿ ವಿಭಾಗದಲ್ಲಿ ಸ್ಫೋಟ ಸಂಭವಿಸಿದೆ. ಬ್ಯಾಟರಿ ಸ್ಫೋಟದಿಂದಾಗಿ ಘಟಕದಲ್ಲಿ ಬೆಂಕಿ ಹೊತ್ತಿಕೊಂಡಿದೆ. ಈ ಘಟನೆಯಿಂದಾಗಿ ಪ್ಲಾಂಟ್ ನಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಕಾರ್ಮಿಕರು ಗಾಯಗೊಂಡಿದ್ದಾರೆ. ಯಾವುದೇ ಅನಾಹುತವಾಗಿಲ್ಲ. ಹಲವಾರು ಅಗ್ನಿಶಾಮಕ ವಾಹನಗಳು ತೆರಳಿ ಬೆಂಕಿಯನ್ನು ನಂದಿಸಿವೆ ಎಂದು ವರದಿಯಾಗಿದೆ.
ಜಿಲ್ಲಾಡಳಿತ ಟಾಟಾ ಉಕ್ಕು ಘಟಕದ ಆಡಳಿತದ ಜತೆಗೂಡಿ ತೆರವು ಕಾರ್ಯಾಚರಣೆ ಮತ್ತು ಗಾಯಾಳುಗಳ ಚಿಕಿತ್ಸೆಗೆ ಕ್ರಮ ಕೈಗೊಳ್ಳುತ್ತಿದೆ ಎಂದು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.










