ಬೆಳಗಾವಿ : ಮಸೀದಿಯ ಮೇಲೆ ಯಾರೋ ಕಿಡಿಗೇಡಿಗಳು ಕೇಸರಿ ಬಣ್ಣದ ಧ್ವಜ ಕಟ್ಟಿದ್ದಾರೆ. ನಿನ್ನೆ ತಡರಾತ್ರಿ ಘಟನೆ ನಡೆದಿದೆ ಎನ್ನಲಾಗಿದ್ದು, ಮುಂಜಾನೆ ಮುಸ್ಲಿಮರು ಪ್ರಾರ್ಥನೆಗೆ ತೆರಳಿದಾಗ ಇದು ಬೆಳಕಿಗೆ ಬಂದಿದೆ.
ಜಿಲ್ಲೆಯ ಮೂಡಲಗಿ ತಾಲೂಕಿನ ಅರಬಾವಿ ಗ್ರಾಮದ ಸತ್ತಿಗೇರಿ ಮಡ್ಡಿಯಲ್ಲಿ ಇರುವಂತಹ ಮಸೀದಿ ಮೇಲೆ ಯಾರೋ ಕಿಡಿಗೇಡಿಗಳು ಮಸೀದಿ ಮೇಲೆ ಕೇಸರಿ ಧ್ವಜ ಕಟ್ಟಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮದ ಹಿಂದೂ ಮತ್ತು ಮುಸ್ಲಿಂ ಹಿರಿಯರು ಧ್ವಜವನ್ನು ತೆರವುಗೊಳಿಸಿದ್ದಾರೆ. ಆದರೆ ಯಾರು ಧ್ವಜ ಕಟ್ಟಿದ್ದಾರೆ ಎಂಬುದು ಇದುವರೆಗೂ ತಿಳಿದು ಬಂದಿಲ್ಲ.
ಸದ್ಯ ಸ್ಥಳದಲ್ಲಿ ವಾತಾವರಣ ಶಾಂತವಿದ್ದು, ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಸ್ಥಳದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ. ಆರೋಪಿಗಳಿಗಾಗಿ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ.










