ತುಮಕೂರು : ಮೂರು ಬೈಕ್ ಗಳ ನಡುವೆ ನಡೆದ ಅಪಘಾತದಲ್ಲಿ ನಾಲ್ವರು ಬೈಕ್ ಸವಾರರು ಸಾವನಪ್ಪಿರುವ ಘಟನೆ ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ಮಾಯಸಂದ್ರ ಹೋಬಳಿಯ ಶೆಟ್ಟಗೊಂಡನಹಳ್ಳಿ ಗೇಟ್ ಬಳಿ ನಡೆದಿದೆ.
ಮೃತರನ್ನು ಬುಕ್ಕಾಪಟ್ಟಣದ ಭೂತೇಶ್ (25), ಶಶಿಧರ್ (26), ನವೀನ್ (28) ಮತ್ತು ಸಿ.ಎಸ್.ಪುರ ಗ್ರಾಮದ ರಂಗನಾಥ್ ( 24) ಎಂದು ಗುರುತಿಸಲಾಗಿದೆ. ಬುಕ್ಕಾಪಟ್ಟಣದಿಂದ ಯಡಿಯೂರು ಕಡೆಗೆ ಹೊರಟಿದ್ದ ಬೈಕ್ ಗಳಿಗೆ ಸಿಎಸ್ ಪುರದಿಂದ ಬರುತ್ತಿದ್ದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಮಾಯಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










