ಪಠ್ಯಪುಸ್ತಕ ಪರಿಷ್ಕರಣೆಗೆ ತೀವ್ರ ವಿರೋಧ; ಮೇ 31ರಂದು ರಾಜ್ಯಾದ್ಯಂತ ಪ್ರತಿಭಟನೆಗೆ ಕರವೇ ನಿರ್ಧಾರ…

84
firstsuddi

ಧಾರವಾಡ : ಕರ್ನಾಟಕ ಪಠ್ಯಪುಸ್ತಕ ಪರಿಷ್ಕರಣೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ನಿನ್ನೆ ಎಲ್ಲಾ ಕರವೇ ಜಿಲ್ಲಾ ಪದಾಧಿಕಾರಿಗಳ ಜೊತೆ ಸಭೆ ನಡೆಸಿದ್ದ ನಾರಾಯಾಣಗೌಡರು, ಮೇ 31ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಬೆಂಗಳೂರು ಸೇರಿ ಎಲ್ಲಾ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಯಲಿದೆ.

ಪಠ್ಯಪುಸ್ತಕ ಪರಿಷ್ಕರಣ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ವಜಾ ಮಾಡಬೇಕು ಹಾಗೂ ಪಠ್ಯವನ್ನು ಬದಲಿಸಬೇಕು ಎಂದು ಬೇಡಿಕೆಯನ್ನು ಕರವೇ ಇರಿಸಿದೆ. ಮೇ 31ರ ಪ್ರತಿಭಟನೆಗೆ ಸರ್ಕಾರ ಪಠ್ಯಪುಸ್ತಕ ಪರಿಷ್ಕರಣೆ ಬದಲಿಸದೆ ಇದ್ದರೆ ಮುಂದಿನ ದಿನದಲ್ಲಿ ಹೋರಾಟದ ತೀವ್ರತೆ ಹೆಚ್ಚಿಸಲು ನಿರ್ಧಾರ ಮಾಡಲಾಗಿದೆ.

ಪಠ್ಯ ಪರಿಷ್ಕರಣೆಗೆ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆಯುತ್ತಿದ್ದು, ವಿವಿಧ ಸಂಘಟನೆಗಳು ಸರ್ಕಾರಕ್ಕೆ ಮೇ 31ರವರೆಗೆ ಗಡುವು ನೀಡಿದೆ. ಇನ್ನೂ ಈ ಪ್ರತಿಭಟನೆಗೆ ಸಾಹಿತಿಗಳು, ಚಿಂತಕರು ಹಾಗೂ ಶಿಕ್ಷಣ ತಜ್ಞರ ಹೋರಾಟಕ್ಕೆ ಕರವೇ ಸಾಥ್ ನೀಡಲಿದ್ದಾರೆ. ಇತ್ತ ಪಠ್ಯ ಪರಿಷ್ಕರಣೆ ಹಿಂಪಡೆಯುವಂತೆ ವಿವಿಧ ವಿಧ್ಯಾರ್ಥಿ ಸಂಘಟನೆಗಳಿಂದ ಪ್ರತಿಭಟನಾ ಧರಣಿಗೆ ಕರೆ ನೀಡಿವೆ. ಮೇ 31 ರ ಪ್ರತಿಭಟನೆಯಲ್ಲಿ ಹಲವು ವಿದ್ಯಾರ್ಥಿ ಸಂಘಟನೆಗಳು ಭಾಗಿಯಾಗಲಿವೆ.

31 ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಕಛೇರಿ ಮುಂದೆ ಹೋರಾಟ ಮಾಡಲು ಕರವೇ ನಿರ್ಧಾರ ಮಾಡಿದ್ದು, 31 ರೊಳಗೆ ಹೊಸ ಪಠ್ಯಕ್ರಮದ ಪರಿಷ್ಕರಣ ಸಮತಿಯನ್ನ ವಜಾ ಮಾಡುವಂತೆ ಗಡುವು ನೀಡಿದೆ. ಹಳೆಯ ಪಠ್ಯಕ್ರಮವನ್ನೇ ಮುಂದುವರಿಸಬೇಕು ಎಂದು ಕರವೇ ಮನವಿ ಮಾಡಿಕೊಂಡಿದೆ.