ಬೆಳಗಾವಿ : ನನಗೆ ಡ್ಯಾನ್ಸ್ ಮಾಡೋಕೆ ಬರಲ್ಲ. ಆದರೆ ನಾನು ಬೇರೆಯವರನ್ನು ಕುಣಿಸುತ್ತೇನೆ ಎಂದು ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ವಿರೋಧಿಗಳಿಗೆ ಟಾಂಗ್ ನೀಡಿದ್ದಾರೆ.
ನಗರದ ಕೆಎಲ್ಇ ಜೀರಿಗೆ ಸಭಾಗೃಹದಲ್ಲಿ ರಾಜು ಪವಾರ್ ಫೌಂಡೇಶನ್ ವತಿಯಿಂದ ಕಾಮಿಡಿ ಚಾರಿಟೇಬಲ್ ಶೋ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವೇಳೆ ಮಾತನಾಡಿದ ಅವರು, ಭಾರತ ದೇಶದಲ್ಲಿ ವಿವಿಧತೆಯಲ್ಲಿ ಏಕತೆಯನ್ನು ಕಾಣಬಹುದು. ಭಾಷೆ-ವೇಷ ಬೇರೆಯಾದರು ನಾವೆಲ್ಲರೂ ಭಾರತೀಯರೇ ಎಂದರು.
ಕೊರೊನಾ ಕಾಲದಲ್ಲಿ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳ ಕಾರ್ಯ ಶ್ಲಾಘನೀಯವಾದದ್ದು. ಅವರಿಗೂ ಮನೋರಂಜನೆ ಸಿಗಲೆಂದು ರಾಜು ಪವಾರ್ ಆಯೋಜಿಸಿರುವ ಕಾರ್ಯಕ್ರಮ ಶ್ಲಾಘನೀಯ ಎಂದರು. ಇದೇ ವೇಳೆ ನಾನು ಡ್ಯಾನ್ಸ್ ಕಲಿತಿಲ್ಲ. ಆದರೆ, ಬೇರೆಯವರನ್ನು ಕುಣಿಸೊದನ್ನ ಚೆನ್ನಾಗಿ ಕಲಿತಿದ್ದೇನೆ ಎಂದರು.










