ನಾಳೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಪಂಜಾಬ್ ಸಿಎಂ.

51
firstsuddi

ಚಂಡೀಗಢ : ಪಂಜಾಬ್ ಸಿಎಂ ಭಗವಂತ್ ಮಾನ್ ಅವರು ನಾಳೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಡಾ. ಗುರುಪ್ರಿತ್ ಕೌರ್ ಜೊತೆ ಸಪ್ತಪದಿ ತುಳಿಯಲಿದ್ದು, ಚಂಡೀಗಢದಲ್ಲಿ ಮದುವೆ ಕಾರ್ಯಕ್ರಮ ನಡೆಯಲಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಾನ್ ಅವರ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಭಗವಂತ್ ಮಾನ್ ಅವರಿಗೆ ಇದು 2ನೇ ಮದುವೆ. ಆರು ವರ್ಷಗಳ ಹಿಂದೆ ಭಗವಂತ್ ಮಾನ್ ಮೊದಲ ಪತ್ನಿ ಇಂದರ್ ಪ್ರೀತ್ ಕೌರ್ ಗೆ ವಿಚ್ಛೇದನ ನೀಡಿದ್ದು, ಸದ್ಯ ಅವರು ಅಮೆರಿಕಾದಲ್ಲಿ ಎರಡು ಮಕ್ಕಳೊಂದಿಗೆ ವಾಸ ಮಾಡುತ್ತಿದ್ದಾರೆ. ಭಗವಂತ್ ಮಾನ್ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಿದ್ದರು. ಡಾ. ಗುರುಪ್ರೀತ್ ಕೌರ್ ಎಂಬಿಬಿಎಎಸ್ ಪದವೀಧರೆ ಆಗಿದ್ದು, ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆಂದು ತಿಳಿದು ಬಂದಿದೆ.