ವೀರಶೈವ ಲಿಂಗಾಯತ ವಿಧಿ-ವಿಧಾನದಂತೆ ಚಂದ್ರಶೇಖರ್ ಗುರೂಜಿ ಅಂತ್ಯಕ್ರಿಯೆ…

81
firstsuddi

ಹುಬ್ಬಳ್ಳಿ : ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿಯವರ ಅಂತ್ಯ ಸಂಸ್ಕಾರ ಹುಬ್ಬಳ್ಳಿಯ ಸುಳ್ಳ ಗ್ರಾಮದಲ್ಲಿ ನೇರವೇರಿದೆ. ವೀರಶೈವ ಲಿಂಗಾಯತ ವಿಧಿ ವಿಧಾನದ ಪ್ರಕಾರ ಅಂತ್ಯಕ್ರಿಯೆ ನೆರವೇರಿದ್ದು, 10 ಸ್ವಾಮೀಜಿಗಳು ಅಂತ್ಯಕ್ರಿಯೆಯನ್ನು ನಡೆಸಿ ಕೊಟ್ಟರು.

ಪಂಚಾಕ್ಷರಿ ಮಹಾ ಮಂತ್ರದೊಂದಿಗೆ ಅಂತಿಮ ವಿಧಿವಿಧಾನ ನೆರವೇರಿದೆ. ಚಂದ್ರಶೇಖರ್ ಗುರೂಜಿ ಅವರ ಸಹೋದರನ ಹಿರಿಯ ಮಗ ಸಂತೋಷ್ ಅಂತಿಮ ವಿಧಿ ವಿಧಾನವನ್ನು ನಡೆಸಿದರು. ಈ ವೇಳೆ ಅವರ ಪತ್ನಿ ಅಂಕಿತಾ, ಮಗಳು ಸ್ವಾತಿ ಹಾಗೂ ಸರಳ ವಾಸ್ತು ಸಂಸ್ಥೆಯ ಉದ್ಯೋಗಿಗಳ ಅಕ್ರಂದನ ಮುಗಿಲು ಮುಟ್ಟಿತ್ತು.

ಕಿಮ್ಸ್ ಶವಗಾರದಿಂದ ಪಾರ್ಥಿವ ಶರೀರವನ್ನು ಮೆರವಣಿಗೆ ಮೂಲಕ ಹುಬ್ಬಳ್ಳಿ ನಗರದ ಹೊರ ವಲಯದ ಸುಳ್ಳ ರಸ್ತೆಯ ಅವರ ಜಮೀನಿಗೆ ತೆಗೆದುಕೊಂಡು ಬರಲಾಯಿತು. ಅಂತ್ಯಕ್ರಿಯೆ ಸ್ಥಳದಲ್ಲಿಯೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ರಾಜ್ಯದ ವಿವಿಧ ಸ್ಥಳಗಳಿಂದ ನೂರಾರು ಜನರು ಬಂದು ಗುರೂಜಿಯವರ ಅಂತಿಮ ದರ್ಶನ ಪಡೆದರು. ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸಹ ಗುರೂಜಿಯವರ ಅಂತಿಮ ದರ್ಶನ ಪಡೆದರು. ಗುರೂಜಿ ಮುದ್ದಿನ ಶ್ವಾನ ಕೂಡ ಯಜಮಾನನ ಅಂತಿಮ ದರ್ಶನ ಪಡೆಯಿತು. ಶವಪೆಟ್ಟಿಗೆ ಮೇಲೆ ಕುಳಿತು ದುಃಖ ಹೊರಹಾಕಿತ್ತು.