ಕುಡಿದ ಅಮಲಿನಲ್ಲಿ ವ್ಯಕ್ತಿಯ ಗುದದ್ವಾರಕ್ಕೆ ಸ್ಟೀಲ್ ಗ್ಲಾಸ್ ತುರುಕಿದ ಸ್ನೇಹಿತರು…

52
firstsuddi

ಭುವನೇಶ್ವರ್ : ಕುಡಿದ ಮತ್ತಿನಲ್ಲಿ ವ್ಯಕ್ತಿಯ ಗುದದ್ವಾರದೊಳಗೆ ಆತನ ಸ್ನೇಹಿತರೇ ಸ್ಟೀಲ್ ಗ್ಲಾಸ್ ತುರುಕಿರುವ ಘಟನೆ ಒಡಿಶಾದ ಬೆಹ್ರಾಂಪುರದಲ್ಲಿ ನಡೆದಿದೆ. ಗುಜರಾತ್ ನ ಸೂರತ್ ನಲ್ಲಿ ಕೆಲಸ ಮಾಡುತ್ತಿರುವ 45 ವರ್ಷದ ಕೃಷ್ಣ ರೌತ್, 10 ದಿನಗಳ ಹಿಂದೆ ತನ್ನ ಸ್ನೇಹಿತರೊಂದಿಗೆ ಪಾರ್ಟಿ ಮಾಡುತ್ತಿದ್ದರು. ಈ ವೇಳೆ ಅವನ ಸ್ನೇಹಿತರು ಕುಡಿದ ಅಮಲಿನಲ್ಲಿ ಗುದದ್ವಾರದೊಳಗೆ ಸ್ಟೀಲ್ ಗ್ಲಾಸ್ ಅನ್ನು ತುರುಕಿದ್ದಾರೆ.

ಮರುದಿನ ಬೆಳಗ್ಗೆ ಕೃಷ್ಣ ರೌತ್ ನೋವಿನಿಂದ ವಿಪರೀತ ತೊಂದರೆ ಅನುಭವಿಸಿದ್ದಾರೆ. ಆದರೆ ಇದರ ಬಗ್ಗೆ ಯಾರಿಗೂ ಹೇಳಿಕೊಂಡಿಲ್ಲ. ನೋವು ಹೆಚ್ಚಾಗಿದ್ದರಿಂದ ಸೂರತ್ ನಿಂದ ಹಳ್ಳಿಗೆ ವಾಪಸ್ ಆಗಿದ್ದಾರೆ. ಗುದದ್ವಾರ ಸಂಪೂರ್ಣವಾಗಿ ಬಂದ್ ಆಗಿರುವ ಕಾರಣ ಮಲವಿಸರ್ಜನೆ ಮಾಡಲು ಸಹ ಸಾಧ್ಯವಾಗಿಲ್ಲ. ಹೀಗಾಗಿ, ಹೊಟ್ಟೆ ದೊಡ್ಡದಾಗಿ ಊದಿಕೊಂಡಿದೆ. ಬಳಿಕ ಎಂಕೆಸಿಜಿ ಆಸ್ಪತ್ರೆಗೆ ತೆರಳಿ, ವೈದ್ಯರನ್ನು ಸಂಪರ್ಕಿಸಿದ್ದಾನೆ. ಈ ವೇಳೆ ನಡೆದ ಘಟನೆ ಬಗ್ಗೆ ತಿಳಿಸಿದ್ದಾನೆ.

ಆತನಿಗೆ ಎಕ್ಸ್-ರೇ ನಡೆಸಲಾಗಿದ್ದು, ಈ ವೇಳೆ ಗುದದ್ವಾರದಲ್ಲಿ ಸ್ಟೀಲ್ ಗ್ಲಾಸ್ ಸಿಲುಕಿಕೊಂಡಿರುವುದು ಪತ್ತೆಯಾಗಿದೆ. ಗುದನಾಳದ ಮೂಲಕವೇ ಅದನ್ನು ಹೊರತೆಗೆಯುವ ಯತ್ನ ನಡೆಸಿರುವ ವೈದ್ಯರು, ಅದರಲ್ಲಿ ವಿಫಲರಾಗಿದ್ದಾರೆ. ಹೀಗಾಗಿ, ಆತನಿಗೆ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಆಸ್ಪತ್ರೆಯ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಪ್ರೊ.ಚರಣ್ ಪಾಂಡಾ, ಸಹಾಯಕ ಪ್ರಾಧ್ಯಾಪಕ ಡಾ. ಸಂಜಿತ್ ಕುಮಾರ್ ನಾಯಕ್, ಡಾ.ಸುಬ್ರತ್ ಬರಲ್, ಡಾ.ಸತ್ಯಸ್ವರೂಪ್ ಮತ್ತು ಡಾ.ಪ್ರತಿಭಾ ಅವರನ್ನೊಳಗೊಂಡ ವೈದ್ಯರ ತಂಡ ಶಸ್ತ್ರಚಿಕಿತ್ಸೆ ಮೂಲಕ ಗ್ಲಾಸ್ ಹೊರತೆಗೆದಿದ್ದಾರೆ. ಇದೀಗ ಆತ ಚೇತರಿಸಿಕೊಳ್ಳುತ್ತಿದ್ದಾನೆಂದು ತಿಳಿದು ಬಂದಿದೆ.