ಬೆಂಗಳೂರು : ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರನ್ನು ಭೇಟಿಯಾದರು. ವಿಧಾನಸೌಧದಿಂದ ನೇರವಾಗಿ ಪದ್ಮನಾಭ ನಗರ ನಿವಾಸಕ್ಕೆ ತೆರಳಿದ ಸಿಎಂ ಮಾಜಿ ಪ್ರಧಾನಿಯ ಆರೋಗ್ಯ ವಿಚಾರಿಸಿದರು. ಈ ವೇಳೆ ಸಿಎಂಗೆ ಆರ್.ಅಶೋಕ್, ಮುನಿರತ್ನ, ಬೈರತಿ ಬಸವರಾಜ್ ಸಾಥ್, ಮಾಧುಸ್ವಾಮಿ, ಗೋಪಾಲಯ್ಯ, ವಿ ಸೋಮಣ್ಣ ಮೊದಲಾದವರು ಸಾಥ್ ನೀಡಿದರು.
ಮಂಡಿ ನೋವಿನಿಂದ ಬಳಲುತ್ತಿರುವ ದೇವೇಗೌಡರು, ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ. ನಿನ್ನೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಸೋಮವಾರ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪದ್ಮನಾಭ ನಗರದ ನಿವಾಸಕ್ಕೆ ತೆರಳಿ ದೇವೇಗೌಡರ ಆರೋಗ್ಯ ವಿಚಾರಿಸಿದ್ದರು.










