ರಾಜೀವ್ ಗಾಂಧಿ ಹತ್ಯೆ ಪ್ರಕರಣ ; ಅಪರಾಧಿ ನಳಿನಿ ಶ್ರೀಹರನ್ ಜೈಲಿನಿಂದ ಬಿಡುಗಡೆ…

67
firstsuddi

ಚೆನ್ನೈ : ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಅಪರಾಧಿ ನಳಿನಿ ಶ್ರೀಹರನ್ ನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿದೆ.

ನಿನ್ನೆ ಆರು ಮಂದಿ ಅಪರಾಧಿಗಳನ್ನು ಬಿಡುಗಡೆ ಮಾಡುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದ ಒಂದು ದಿನದ ನಂತರ ನಳಿನಿ ಶ್ರೀಹರನ್ ಅವರನ್ನು ಇಂದು ರಿಲೀಸ್ ಮಾಡಲಾಗಿದೆ.

ಹತ್ಯೆ ಪ್ರಕರಣದಲ್ಲಿ 7 ಮಂದಿ ಭಾಗಿಯಾಗಿದ್ದು, 7 ಮಂದಿಯಲ್ಲಿ ಪೆರಾರಿವಾಳನ್ ಅವರನ್ನು ಮೇ 18ರಂದು ವಿಶೇಷ ಸೆಕ್ಸನ್ 142 ಅಡಿ ಸುಪ್ರೀಂ ಕೋರ್ಟ್ ಬಿಡುಗಡೆ ಮಾಡಿತ್ತು. ಅದಾದ ಬಳಿಕ ಉಳಿದ ಆರು ಮಂದಿಯಲ್ಲಿ ಕಳೆದ ಆಗಸ್ಟ್ ನಲ್ಲಿ ನಳಿನಿ ಮತ್ತು ರವಿಚಂದ್ರನ್ ಅದೇ ಸೆಕ್ಸನ್ ಬಳಸಿ ಬಿಡುಗಡೆ ಮಾಡುವಂತೆ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದರು.

ರಾಜೀವ್ ಗಾಂಧಿಯವರು ಮೇ 21, 1991 ರಂದು ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ತಮಿಳು ಟೈಗರ್ಸ್ ಎಲ್ ಟಿಟಿಇ ಗುಂಪಿನ ಮಹಿಳಾ ಆತ್ಮಾಹುತಿ ಬಾಂಬರ್ ನಿಂದ ಹತ್ಯೆಗೀಡಾಗಿದ್ದರು.