ಚಿಕ್ಕಮಗಳೂರು : ಸರ್ಫೇಸಿ ಕಾಯ್ದೆಯನ್ನು ಮುಂದಿಟ್ಟುಕೊಂಡು ರಾಷ್ಟ್ರೀಕೃತ ಬ್ಯಾಂಕ್ನ ಆಡಳಿತ ಮಂಡಳಿಯವರು ಬೆಳೆಗಾರರನ್ನು ಶೋಷಣೆ ಮಾಡುತ್ತಾ ಹರಾಜು ಹಾಕುವುದ ರೊಂದಿಗೆ ಜೀವ ಬೆದರಿಕೆವೊಡ್ಡಿ ಹಿಂಸಿಸುತ್ತಿದ್ದಾರೆ ಎಂದು ಜೆಡಿಎಸ್ ಜಿಲ್ಲಾ ವಕ್ತಾರ ಹಾಗೂ ಕಾಫಿ ಬೆಳೆಗಾರರ ಹಿತರಕ್ಷಣಾ ವೇದಿಕೆ ಜಿಲ್ಲಾ ಕಾರ್ಯದರ್ಶಿ ಹೊಲದಗದ್ದೆ ಗಿರೀಶ್ ಆರೋಪಿಸಿದ್ದಾರೆ.
ಈ ಸಂಬಂಧ ಹೇಳಿಕೆಯಲ್ಲಿ ತಿಳಿಸಿರುವ ಅವರು ಬೆಳೆಗಾರರಿಗೆ ಸಾಲ ನೀಡುವ ಮೊದಲು ಸರ್ಫೇಸಿ ಕಾಯ್ದೆ ಎಂಬುದನ್ನು ಜಾರಿಯಲಿರಲಿಲ್ಲ. ನಂತರ ಜಾರಿಗೆ ತರಲಾಗಿದೆ. ಆದರೆ ಬೆಳೆಗಾರರಿಗೆ ಸಾಲ ನೀಡುವ ಮೊದಲೇ ಸರ್ಫೇಸಿ ಬಗ್ಗೆ ತಿಳಿಸಿದ್ದರೆ ಸಾಲವನ್ನೇ ತೆಗೆದುಕೊಳ್ಳುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಅದರಲ್ಲೂ ಬೇರೆಲ್ಲಾ ಬ್ಯಾಂಕ್ ಗಳಿಗೆ ಹೋಲಿಸಿದರೆ ಕೆನರಾ ಬ್ಯಾಂಕ್ ನಲ್ಲಿ ಸಾಲ ಮಾಡಿದ ಬೆಳೆಗಾರರಿಗೆ ಒನ್ ಟೈಮ್ ಸೆಟಲ್ಮೆಂಟ್ ಮಾಡಲು ಸಾಲ ಪಡೆದ ರೈತ ಬ್ಯಾಂಕಿಗೆ ಹೋದರೆ ಅವರು ಮೊದಲು ಜೋನಲ್ ಆಫೀಸಿಗೆ ಕರೆಸಿ ಅಲ್ಲೊಂದು ಸೆಟಲ್ಮೆಂಟ್ ಅಮೌಂಟ್ ಹೇಳುತ್ತಾರೆ ನಂತರ ಕೇಂದ್ರ ಕಚೇರಿಗೆ ಕರೆಸಿ, ಅಲ್ಲಿ ಕಾಫಿ ತೋಟಗಳನ್ನು ಮಾರಾಟ ಮಾಡಿದರು ಅದಕ್ಕಿಂತ ಅಧಿಕ ಮತದ ಹಣ ಕಟ್ಟಿಯೆಂದು ಬೆದರಿಸುತ್ತಾರೆ ಎಂದು ತಿಳಿಸಿದ್ದಾರೆ.
ಸರ್ಫೇಸಿ ಕಾಯ್ದೆಯ ಪ್ರಕಾರ ಹರಾಜು ಹಾಕುವ ಬೆದರಿಕೆ ಹಾಕುತ್ತಿದ್ದಾರೆ ಇದೇ ರೀತಿ ಮುಂದುವರಿದು ಒಂದು ನಿಗದಿತ ಹಣವನ್ನು ಸೆಟಲ್ಮೆಂಟ್ ಮಾಡಬೇಕು ಬೇರೆ ಬ್ಯಾಂಕ್ ಗಳಲ್ಲಿ ಬೆಳೆಗಾರರಿಗೆ ಸಮಾಧಾನ ಆಗುವ ರೀತಿಯಲ್ಲಿ ಕಟ್ಟಿಸಿಕೊಂಡು ಪರಿಹಾರ ಕಂಡುಕೊಳ್ಳುತ್ತಾರೆ. ಆದರೆ ಕೆನರಾ ಬ್ಯಾಂಕ್ ಮಾತ್ರ ಇದ್ಯಾವುದನ್ನು ತಲೆಕೆಡಿಸಿಕೊಳ್ಳದೇ ಬೆಳೆಗಾರರ ಮೇಲೆ ಶೋಷಣೆ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.
ಈಗಾಗಲೇ ಎಂಟು ರಾಜ್ಯದಲ್ಲಿ ಉದ್ಯೋಗ ಖಾತ್ರಿ ಇಲ್ಲದಂತಾಗಿದೆ. ಆದರೆ ದಕ್ಷಿಣ ಕರ್ನಾಟಕ ಪ್ರದೇಶದ ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಹತ್ತು ವರ್ಷಗಳ ಹಿಂದೆಯೇ 350-400 ರೂ.ಗಳವರೆಗೆ ಅಧಿಕೃತವಾಗಿ ವೇತನ ನೀಡಿ ಉದ್ಯೋಗ ನೀಡಲಾಗುತ್ತಿತ್ತು. ಮುಂದಿನ ದಿನಗಳಲ್ಲಿ ಇದೇ ಕಾಫಿ ಬೆಳೆಗಾ ರರಿಗೆ ಸಮಸ್ಯೆಯಿಂದ ಹೊರತರದಿದ್ದಲ್ಲಿ ಮುಂದಿನ ಪೀಳಿಗೆಗೆ ಬೆಳೆಗಾರ ಕಾಫಿ ಬೆಳೆಯಲು ನಿರಾಸಕ್ತಿ ಹೊಂದುವುದರಲ್ಲಿ ಸಂಶಯವಿಲ್ಲ.
ಆದ್ದರಿಂದ ಕಾಫಿ ಬೆಳೆಗಾರರ ಸರ್ಫೇಸಿ ಕಾಯ್ದೆಯಿಂದ ಹೊರಗಿಡಬೇಕು ಕೆಲಸವಾಗಬೇಕು. ಜೊತೆಗೆ ಎಲ್ಲಾ ಬ್ಯಾಂಕ್ಗಳು ಸಮಾಧಾನ ರೀತಿಯಲ್ಲಿ ಸ್ಪಂದಿಸುವ ಕೆಲಸ ಮಾಡುತ್ತಿದ್ದಾರೆ ಕೆನರಾ ಬ್ಯಾಂಕ್ ಮಾತ್ರ ಬೆಳೆಗಾರರನ್ನು ನಿಂದಿಸುವ ರೀತಿಯಲ್ಲಿ ಕೆಲಸ ಮಾಡುತ್ತಿವೆ. ಕೂಡಲೇ ಎಲ್ಲಾ ಬ್ಯಾಂಕ್ ರೀತಿಯಲ್ಲೇ ಸ್ಪಂದಿಸುವ ಕೆಲಸ ಮಾಡದಿದ್ದಲ್ಲಿ ಕೆನರಾ ಬ್ಯಾಂಕ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.










