ಶ್ರದ್ಧಾ ಹತ್ಯೆ ಪ್ರಕರಣ ; ಭಯಾನಕ ಸತ್ಯ ಬಾಯ್ಬಿಟ್ಟ ಅಫ್ತಾಬ್.

67
firstsuddi

ನವದೆಹಲಿ: ರಾಷ್ಟ್ರ ರಾಜಧಾನಿಯನ್ನು ಬೆಚ್ಚಿ ಬೀಳಿಸಿದ ಶ್ರದ್ಧಾ ಭೀಕರ ಹತ್ಯೆ ಪ್ರಕರಣವು ದಿನೇ ದಿನೇ ತಿರುವು ಪಡೆದುಕೊಳ್ಳುತ್ತಿದೆ. ಅಫ್ತಾಬ್ ಶ್ರದ್ಧಾಳನ್ನು ಹತ್ಯೆ ಮಾಡಿದ್ದು ಹೇಗೆ ಎಂಬುದನ್ನು ಖಾಕಿ ಎದುರು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾನೆ.

ನಾನು ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಸೈ ಮೂಲದವ. ಡೇಟಿಂಗ್ ಆ್ಯಪ್ ನಲ್ಲಿ ಶ್ರದ್ಧಾ ಪರಿಚಯವಾಗಿತ್ತು. ಬಳಿಕ ಮುಂಬೈನ ಕಾಲ್ ಸೆಂಟರ್ ನಲ್ಲಿ ಇಬ್ಬರು ಒಟ್ಟಿಗೆ ಕೆಲಸಕ್ಕೆ ಸೇರಿದೆವು. ನಮ್ಮ ಆತ್ಮೀಯತೆ ಹೆಚ್ಚಿ ಪ್ರೀತಿಸಲು ಪ್ರಾರಂಭಿಸಿದೆವು. 2019ರಲ್ಲಿ ನಮ್ಮ ಮದುವೆ ಬಗ್ಗೆ ಶ್ರದ್ಧಾ ಅವಳ ಮನೆಯಲ್ಲಿ ಪ್ರಸ್ತಾಪಿಸಿದಳು. ಅದಕ್ಕೆ ವಿರೋಧ ವ್ಯಕ್ತವಾಯಿತು. ವಿರೋಧ ಬಳಿಕ ನಾವು ಮುಂಬೈನ ನೈಗಾಂವ್ ನಲ್ಲಿ ವಾಸಿಸಲು ಪ್ರಾರಂಭಿಸಿದೆವು. ಕೆಲವು ದಿನಗಳ ಬಳಿಕ ದೆಹಲಿಗೆ ಶಿಫ್ಟ್ ಆದೆವು. ದೆಹಲಿಯಿಂದ ಹಿಮಾಚಲ ಪ್ರದೇಶಕ್ಕೆ ಭೇಟಿ ನೀಡಿ ಮತ್ತೆ ದೆಹಲಿಗೆ ಮರಳಿದೆವು.

ದೆಹಲಿಯ ಪಹರ್ ಗಂಜ್ ನ ಹೋಟೆಲ್ ನಲ್ಲಿ ಒಂದು ದಿನ ಉಳಿದುಕೊಂಡೆವು. ಮೇ 15ರಂದು ಮೆಹ್ರೋಲಿ ಯ ಛತ್ತರಪುರ ಪಹಾಡಿಯಲ್ಲಿ ಮನೆಯೊಂದನ್ನು ಬಾಡಿಗೆ ಪಡೆದು ಒಟ್ಟಿಗೆ ಇದ್ದೆವು. ಮೇ 18ರಂದು ಮದುವೆ ವಿಚಾರಕ್ಕೆ ಜಗಳ ಆರಂಭವಾಯಿತು. ನಾನು ಅವಳ ಬಾಯಿ ಮುಚ್ಚುವ ಪ್ರಯತ್ನ ಮಾಡಿದೆ. ಬಳಿಕ ಕತ್ತು ಹಿಸುಕಿದೆ ಅವಳು ಸಾವನ್ನಪ್ಪಿದಳು.

ಮೇ 18ಕ್ಕೆ ಶ್ರದ್ಧಾ ಕೊಲೆ ಮಾಡಿ ಬಾತ್ ರೂಮ್ ನಲ್ಲಿ ಡೆಡ್ ಬಾಡಿ ಬಚ್ಚಿಟ್ಟಿದ್ದೆ. ಮೇ 19ರಂದೇ ಹೋಗಿ ಕ್ರೆಡಿಟ್ ಕಾರ್ಡ್ ಮೂಲಕ 22 ಸಾವಿರ ರೂಪಾಯಿ ಕೊಟ್ಟು ಡಬಲ್ ಡೋರ್ ಫ್ರಿಡ್ಜ್ ಖರೀದಿಸಿದೆ. ಸಣ್ಣ ಹರಿತವಾದ ಗರಗಸ ಖರೀದಿಸಿದೆ. ಮೇ 20ರಂದು ಅವಳ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ಫ್ರಿಡ್ಜ್ ನಲ್ಲಿ ತುಂಬಿದೆ. ನಿತ್ಯ ರಾತ್ರಿ ಒಂದು ಗಂಟೆಯ ಬಳಿಕ ಕವರ್ ಗಳನ್ನು ಕಾಡಿನ ಮಧ್ಯಕ್ಕೆ ಹೋಗಿ ಎಸೆದು ಬರ್ತಿದ್ದೆ. ನಾನು ಹೆಚ್ಚಾಗಿ ಕ್ರೈಮ್ ಸೀರಿಯಲ್ಸ್ ನೋಡ್ತಿದ್ದರಿಂದ ಡೆಡ್ ಬಾಡಿ ಡಿಸ್ಪೋಸಲ್ ಹೇಗೆಂದು ಪ್ಲ್ಯಾನ್ ಮಾಡಿದೆ. ಶ್ರದ್ಧಾ ಬಾಡಿ ತುಂಡು ತುಂಡಾಗಿ ನಾನೇ ಕತ್ತರಿಸಿ ಹಾಕಿದ್ದೆ ಎಂದು ಹಂತಕ ಅಫ್ತಾಬ್ ಒಪ್ಪಿಕೊಂಡಿದ್ದಾನೆ.

ಕೊಲೆ ಮಾಡಿದ ನಂತರದ ದಿನಗಳಲ್ಲಿ ಶ್ರದ್ಧಾ ಇನ್ಸ್ಟಾಗ್ರಾಮ್ ಅಕೌಂಟ್ ಆಪರೇಟ್ ಮಾಡ್ತಿದ್ದೆ. ಶ್ರದ್ಧಾ ಇನ್ಸ್ಟಾಗ್ರಾಮ್ ನಲ್ಲಿ ಅಪ್ಡೇಟ್ಸ್ ಮಾಡ್ತಾ, ಶ್ರದ್ಧಾ ಫ್ರೆಂಡ್ಸ್ ಜತೆಗೂ ಚಾಟಿಂಗ್ ಮಾಡ್ತಿದ್ದೆ. ಶ್ರದ್ಧಾ ಬದುಕಿದ್ದಾಳೆ ಅಂತಾ ಬಿಂಬಿಸಲು ಶ್ರದ್ಧಾ ಅಕೌಂಟ್ ಆಪರೇಟ್ ಮಾಡ್ತಿದ್ದೆ ಎಂದಿದ್ದಾನೆ. ಪೊಲೀಸರು ಸದ್ಯ ಹಂತಕ ಅಫ್ತಾಬ್ ನನ್ನು ಕಾಡಿಗೆ ಕರೆದೊಯ್ದು ಮಹಜರ್ ಮಾಡಿಸಿದ್ದಾರೆ. ಮಹಜರು ವೇಳೆ ಸಿಕ್ಕಿರುವ ಮನುಷ್ಯ ದೇಹ ಹೋಲುವ 10 ಸ್ಯಾಂಪಲ್ ಗಳನ್ನು ಪರೀಕ್ಷೆಗೆ ರವಾನಿಸಲಾಗಿದೆ. ಶ್ರದ್ಧಾ ತಂದೆ ವಿಕಾಸ್ ವಾಲ್ಕರ್ ಡಿಎನ್ ಎಗೆ ಮ್ಯಾಚ್ ಆಗುತ್ತಾ ಅಂತಾ ವಿಧಿವಿಜ್ಞಾನ ತಜ್ಞರು ಪರೀಕ್ಷಿಸಲಿದ್ದಾರೆ.