ಶ್ರದ್ಧಾ ಕೊಲೆ ಪ್ರಕರಣದ ಆರೋಪಿ ಅಫ್ತಾಬ್‍ಗೆ ಇಂದು ಪಾಲಿಗ್ರಾಫ್ ಪರೀಕ್ಷೆ…

65
firstsuddi

ನವದೆಹಲಿ : ಶ್ರದ್ಧಾ ವಾಕರ್ ಕೊಲೆ ಪ್ರಕರಣದ ಆರೋಪಿ ಅಫ್ತಾಬ್ ಪೂನಾವಾಲಾನನ್ನು ಮತ್ತೊಮ್ಮೆ ಪಾಲಿಗ್ರಾಫ್ ಪರೀಕ್ಷೆಗೆ ಒಳಪಡಿಸಲಾಗುತ್ತದೆ.

ತನ್ನ ಪ್ರೇಯಸಿ ಶ್ರದ್ಧಾಳನ್ನು ಬರ್ಬರವಾಗಿ ಕೊಂದು ಆಕೆಯ ಮೃತ ದೇಹವನ್ನು 35 ಭಾಗಗಳಾಗಿ ಕತ್ತರಿಸಿ ವಿಕೃತ ಮೆರೆದಿದ್ದ ಅಫ್ತಾಬ್ ಗೆ ನ.26ರಂದು ಸಾಕೇತ್ ನ್ಯಾಯಾಲಯ14 ದಿನಗಳ ನ್ಯಾಯಾಂಗ ಬಂಧನವನ್ನು ವಿಸ್ತರಿಸಿತ್ತು.

ಇನ್ನು ಆರೋಪಿ ಅಫ್ತಾಬ್ ಪೊಲೀಸರ ದಿಕ್ಕುತಪ್ಪಿಸಿದ್ದಾನೆ ಎಂಬ ಶಂಕೆ ಉಂಟಾಗಿದ್ದು ಅತೃಪ್ತಿಕರ ಉತ್ತರಗಳಿಂದಾಗಿ ಇಂದು ಅಂತಿಮ ಪಾಲಿಗ್ರಾಫ್ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ಇಂದು ರೋಹಿಣಿಯಲ್ಲಿರುವ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ (ಎಫ್ ಎಸ್ ಎಲ್) ಪಾಲಿಗ್ರಾಫ್ ಪರೀಕ್ಷೆಗೆ ಆರೋಪಿಯನ್ನು ಒಳಪಡಿಸಲಾಗುತ್ತೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪಾಲಿಗ್ರಾಫ್ ಪರೀಕ್ಷೆ ವೇಳೆ ಶ್ರದ್ಧಾ ಹತ್ಯೆಗೆ ಸಂಬಂಧಿಸಿದಂತೆ ಇನ್ನೂ ಉತ್ತರ ಸಿಗದ ಕೆಲವು ಪ್ರಶ್ನೆಗಳಿಗೆ ಪ್ರತಿಕ್ರಿಯಿಸಲು ಆರೋಪಿಗೆ ಕೇಳಲಾಗುತ್ತದೆ. ಇಂದು ಪಾಲಿಗ್ರಾಫ್ ಪರೀಕ್ಷೆ ಮುಗಿದರೆ ಇಂದು ಅಥವಾ ನಾಳೆ ಪೂನಾವಾಲಾ ಅವರ ನಾರ್ಕೋ ವಿಶ್ಲೇಷಣೆಯನ್ನು ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.