ಅಹಮದಾಬಾದ್: ಗುಜರಾತ್ ನಲ್ಲಿ ಚುನಾವಣೆಗೂ ಮುನ್ನ ಎಲ್ಲಾ ಪಕ್ಷಗಳು ಭರ್ಜರಿ ಪ್ರಚಾರ ನಡೆಸುತ್ತಿವೆ. ಈ ನಡುವೆ ಗುಜರಾತ್ ಚುನಾವಣೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಭಾಷಣ ಮಾಡುತ್ತಿದ್ದಾಗ ಗೂಳಿಯೊಂದು ನುಗ್ಗಿದೆ.
ನಿನ್ನೆ ಗುಜರಾತ್ ನ ಮೆಹ್ಸಾನಾದಲ್ಲಿ ರಾಜಸ್ಥಾನದ ಸಿಎಂ ಅಶೋಕ್ ಗೆಹ್ಲೋಟ್ ಅವರ ಚುನಾವಣಾ ರ್ಯಾಲಿ ಇತ್ತು. ಈ ವೇಳೆ ಗೂಳಿಯೊಂದು ಸಭೆಯ ಮಧ್ಯದಲ್ಲಿ ನುಗ್ಗಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜನರು ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ. ಈ ಘಟನೆಯ ಬಗ್ಗೆ ಅಶೋಕ್ ಗೆಹ್ಲೋಟ್ ಬಿಜೆಪಿಗೆ ಹಿಡಿಶಾಪ ಹಾಕಿದ್ದಾರೆ.
ಈ ಹಿಂದಿನಿಂದಲೂ ಕಾಂಗ್ರೆಸ್ ಸಭೆ ನಡೆಸಿದಾಗಲೆಲ್ಲ ಈ ಬಿಜೆಪಿಗರು ಗೂಳಿ, ಹಸು ಬಿಡುವುದನ್ನು ನಾನು ನೋಡಿದ್ದೇನೆ. ಸಭೆಯನ್ನು ಅಡ್ಡಿಪಡಿಸಲು ಬಿಜೆಪಿಯವರು ಈ ಗೂಳಿಯನ್ನು ಬಿಟ್ಟಿದ್ದಾರೆ. ಚುನಾವಣೆಗೂ ಮುನ್ನ ಬಿಜೆಪಿ ನಮ್ಮ ಸಭೆಗಳಿಗೆ ಅಡ್ಡಿಪಡಿಸಲು ಇಂತಹ ಇನ್ನಷ್ಟು ತಂತ್ರಗಳನ್ನು ಮಾಡಲಿದ್ದಾರೆ ಎಂದು ಗೆಹ್ಲೋಟ್ ಆರೋಪಿಸಿದ್ದಾರೆ.










