ಚೆನ್ನೈ: ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಪುತ್ರ ಉದಯನಿಧಿ ಇಂದು ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ತಮಿಳು ನಾಡಿನ ಡಿಎಂಕೆ ಸರ್ಕಾರ ಉದಯನಿಧಿ ಅವರನ್ನು ರಾಜ್ಯದ ನೂತನ ಕ್ರೀಡಾ ಸಚಿವರನ್ನಾಗಿ ನೇಮಿಸಿದೆ.
ಉದಯನಿಧಿ ಅವರಿಗೆ ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಅವರು ರಾಜಭವನದಲ್ಲಿ ಪ್ರಮಾಣ ವಚನ ಬೋಧಿಸಿದರು. ಉದಯನಿಧಿ ಡಿಎಂಕೆ ಯುವ ವಿಭಾಗದ ಕಾರ್ಯದರ್ಶಿಯೂ ಆಗಿದ್ದಾರೆ. ಉದಯನಿಧಿ ಹಲವಾರು ತಮಿಳು ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಎಂಕೆ ಸ್ಟಾಲಿನ್ ಅವರ ಸಂಪುಟಕ್ಕೆ ಉದಯನಿಧಿ ಸ್ಟಾಲಿನ್ ಅವರ ಸೇರ್ಪಡೆಯನ್ನು ಸೂರ್ಯೋದಯದ ಕ್ಷಣವೆಂದು ಡಿಎಂಕೆ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಆದರೆ ಇದು ಸೂರ್ಯೋದಯವಲ್ಲ, ಬದಲಾಗಿ ಇದು ಮಕ್ಕಳ ಉದಯ ಎಂದು ಪ್ರತಿಪಕ್ಷ ಟೀಕಿಸಿದೆ.










