ಈ ದೇಶಕ್ಕೂ, ಸೋನಿಯಾ ಗಾಂಧಿಗೂ ಏನು ಸಂಬಂಧ? : ಡಿಕೆಶಿಗೆ ಈಶ್ವರಪ್ಪ ತಿರುಗೇಟು…

54
firstsuddi

ಬಾಗಲಕೋಟೆ : ವೀರ ಸಾವರ್ಕರ್ ಗೂ ಕರ್ನಾಟಕಕ್ಕೂ ಏನು ಸಂಬಂಧ ಎಂಬ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿದ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರು, ಸೋನಿಯಾ ಗಾಂಧಿಗೂ ಈ ದೇಶಕ್ಕೂ ಏನು ಸಂಬಂಧ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗೆ ತಿರುಗೇಟು ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋನಿಯಾ ಗಾಂಧಿಗೆ ಈ ದೇಶಕ್ಕೆ ಸಂಬಂಧವೇ ಇಲ್ಲ. ಸೋನಿಯಾಗಾಂಧಿ ವಿದೇಶದಿಂದ ಬಂದ ವ್ಯಕ್ತಿ. ನಾನು ವೈಯಕ್ತಿಕವಾಗಿ ಅವರನ್ನು ಟೀಕೆ ಮಾಡಲು ಇಷ್ಟ ಪಡುವುದಿಲ್ಲ ಎಂದರು.

ಕಾಂಗ್ರೆಸ್ ಯಾವ ದಿಕ್ಕಿನಲ್ಲಿ ಹೋಗುತ್ತಿದೆ? ಸೋನಿಯಾ ಗಾಂಧಿ ಜೈಲು ಶಿಕ್ಷೆ ಅನುಭವಿಸಿದ್ದಾರಾ? ರಾಹುಲ್ ಗಾಂಧಿ ಅನುಭವಿಸಿದ್ದಾರಾ? ಡಿ.ಕೆ.ಶಿವಕುಮಾರ್ ಮತ್ತು ಅವರ ಶಿಷ್ಯಂದಿರಿಗೆ ತಿಹಾರ್ ಜೈಲು, ಪರಪ್ಪನ ಅಗ್ರಹಾರ ಜೈಲು ಗೊತ್ತು. ಇದು ಅವರು ವೈಯಕ್ತಿಕವಾಗಿ ಮಾಡಿದಂತಹ ರಾಷ್ಟ್ರದ್ರೋಹಿ ಚಟುವಟಿಕೆಗಳಿಂದ ಜೈಲಿಗೆ ಹೋದರು. ಆದರೆ ವೀರ ಸಾವರ್ಕರ್ ಸ್ವಾತಂತ್ರ್ಯ ಹೋರಾಟಕ್ಕಾಗಿ ಹೋಗಿದ್ದರು. ವೀರ ಸಾವರ್ಕರ್ ಅವರು ಅಂಡಮಾನ್ನ ಜೈಲಲ್ಲಿ ಎಷ್ಟು ವರ್ಷ ಇದ್ದರು? ಅಲ್ಲಿನ ಕಠಿಣ ಶಿಕ್ಷೆ ಎಷ್ಟರ ಮಟ್ಟಿಗೆ ಅನುಭವಿಸಿದರು ಅನ್ನೊದು ಗೊತ್ತಿಲ್ಲ. ಇತಿಹಾಸ ನೋಡಿಕೊಂಡು ಡಿಕೆಶಿ ಮಾತಾಡಲಿ ಎಂದು ತಿರುಗೇಟು ನೀಡಿದರು.

ಇತಿಹಾಸ ನೋಡಿಕೊಂಡು ಡಿಕೆ ಶಿವಕುಮಾರ್ ಅವರು ಮಾತಾಡಲಿ. ಎಲ್ಲದಕ್ಕೂ ರಾಜಕಾರಣ ಮಾಡುವುದು ಸರಿಯಲ್ಲ, ಇದು ತುಂಬಾ ನೋವಾಗುತ್ತದೆ ನನಗೆ. ರಾಜಕಾರಣ ಮಾಡಲಿ ನಾವು ಕೂಡ ಮಾಡುತ್ತೇವೆ, ಇಲ್ಲ ಅಂತಲ್ಲ. ಇಂದಿರಾ ಗಾಂಧಿಯವರನ್ನು ಪಾಕಿಸ್ತಾನ ಭಾರತ ಯುದ್ದ ಸಮಯದಲ್ಲಿ ವಾಜಪೇಯಿಯವರು ದುರ್ಗೆ ಅಂತ ಕರೆದರು. ದೇಶದ ಸಂಕಷ್ಟದ ಸಮಯದಲ್ಲೂ ಇಂದಿರಾ ಗಾಂಧಿಯನ್ನು ಹೊಗಳಿದ್ದರು. ಅದೇ ಇಂದಿರಾ ಗಾಂಧಿಯವರು ವಾಜಪೇಯಿ, ಜಯಪ್ರಕಾಶ್ ನಾರಾಯಣ ಸೇರಿದಂತೆ ಅನೇಕ ನಾಯಕರನ್ನು ತುರ್ತು ಪರಿಸ್ಥಿತಿ ತಂದು ಜೈಲು ಸೇರಿಸಿದರು, ಅದನ್ನು ಬಿಜೆಪಿ ವಿರೋಧಿಸಿತು. ಯಾವ ಸಂದರ್ಭದಲ್ಲಿ ರಾಜಕಾರಣ ಮಾಡಬೇಕು ಎಂಬ ಕಲ್ಪನೆ ಕಾಂಗ್ರೆಸ್ ಗೆ ಇಲ್ಲ ಎಂದರು.