ನಟಿ ಜೊತೆ ಅನುಚಿತವಾಗಿ ವರ್ತಿಸಿದ ಕಾಲೇಜು ವಿದ್ಯಾರ್ಥಿ ಅಮಾನತು…

61
firstsuddi

ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಅಪರ್ಣಾ ಬಾಲಮುರಳಿ ಅವರೊಂದಿಗೆ ಅನುಚಿತವಾಗಿ ವರ್ತಿಸಿದ ಕಾಲೇಜು ವಿದ್ಯಾರ್ಥಿಯನ್ನು ಅಮಾನತುಗೊಳಿಸಲಾಗಿದೆ.

ಏನಿದು ಘಟನೆ? : ‘ಸೂರರೈ ಪೊಟ್ರು’ ಸಿನಿಮಾದ ನಟಿ ಅಪರ್ಣಾ ಬಾಲಮುರಳಿ ಸದ್ಯ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ʻತಂಕಂʼ ಸಿನಿಮಾ ಪ್ರಚಾರ ಕಾರ್ಯಕ್ಕಾಗಿ ಕೇರಳದ ಕಾಲೇಜಿಗೆ ಅಪರ್ಣಾ ಮತ್ತು ತಂಡ ಬಂದಿದ್ದರು. ಈ ವೇಳೆ ವೇದಿಕೆ ಮೇಲೆ ಕುಳಿತಿದ್ದ ಅಪರ್ಣಾ ಕಡೆ ವಿದ್ಯಾರ್ಥಿಯೊಬ್ಬರು ಓಡಿ ಬಂದ. ಬಂದವನೇ ಅಪರ್ಣಾ ಕೈ ಹಿಡಿದು ಮಾತನಾಡಿದ, ಬಳಿಕ ಸೆಲ್ಫಿ ಕೇಳಿದ. ಅಪರ್ಣಾ ಕೂಡ ಸೆಲ್ಫಿ ಕೊಡಲು ಎದ್ದು ನಿಂತರು. ಆಗ ವಿದ್ಯಾರ್ಥಿ ಅಪರ್ಣಾ ಹೆಗಲ ಮೇಲೆ ಕೈ ಹಾಕಿದ. ಅಪರ್ಣಾ ಆತನಿಂದ ತಪ್ಪಿಸಿಕೊಂಡು ದೂರ ಹೋದರು.

ಕಾಲೇಜು ವಿದ್ಯಾರ್ಥಿಯ ಕೆಟ್ಟ ವರ್ತನೆಯ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಘಟನೆಯಿಂದ ಅಪರ್ಣಾ ತುಂಬಾ ಹಿಂಸೆ ಅನುಭವಿಸಿದ್ದಾರೆ. ಈ ಘಟನೆಯ ಬಳಿಕ ಕೆಲವು ವಿದ್ಯಾರ್ಥಿಗಳು ನಟಿಯ ಬಳಿ ಬಂದು ಕ್ಷಮೆ ಕೇಳಿದ್ದಾರೆ. ಬಳಿಕ ಅನುಚಿತವಾಗಿ ವರ್ತಿಸಿದ ವಿದ್ಯಾರ್ಥಿ ಕೂಡ ಕ್ಷಮೆ ಕೇಳಿದ್ದಾರೆ.

ಇನ್ನೂ ಈ ಘಟನೆಗೆ ಸಂಬಂಧಿಸಿದಂತೆ ಕಾಲೇಜು ಆಡಳಿತ ಮಂಡಳಿ ನಟಿಗೆ ಕ್ಷಮೆ ಕೇಳಿದೆ. ಈ ಘಟನೆಯಿಂದಾಗಿ ನಮ್ಮ ಕಾಲೇಜಿಗೂ ಕೆಟ್ಟ ಹೆಸರು ಬಂದಿದೆ. ನಮಗೂ ತಲೆ ತಗ್ಗಿಸುವಂತಹ ವಿಚಾರವಿದು. ನಿಮ್ಮೊಂದಿಗೆ ಆ ಹುಡುಗ ಆ ರೀತಿ ನಡೆದುಕೊಂಡಿದ್ದು ತುಂಬಾ ನೋವಾಗಿದೆ. ಹಾಗಾಗಿ ಕ್ಷಮೆ ಕೇಳುತ್ತೇವೆ. ಕೇವಲ ಕ್ಷಮೆ ಮಾತ್ರವಲ್ಲ, ಆ ವಿದ್ಯಾರ್ಥಿಯನ್ನು ಕಾಲೇಜಿನಿಂದ ಅಮಾನತು ಮಾಡಲಾಗಿದೆ ಎಂದು ತಿಳಿಸಿದೆ.