ಕೆಲ ದಿನಗಳ ಹಿಂದೆ ನಟಿ ಪ್ರೇಮಾ ಅವರು ಕೊರಗಜ್ಜನ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ್ದರು. ಆ ಬಳಿಕ ಅವರು ಎರಡನೇ ಮದುವೆ ಆಗಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಅದಕ್ಕೆಲ್ಲ ಈಗ ಸ್ವತಃ ಪ್ರೇಮಾ ಅವರೇ ಸ್ಪಷ್ಟನೆ ನೀಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಪ್ರೇಮಾ, ಮದುವೆ ಬಗ್ಗೆ ಹಬ್ಬಿರುವ ಸುದ್ದಿ ಕೇವಲ ಗಾಸಿಪ್. ಎರಡನೇ ಮದುವೆ ವಿಚಾರ ಎಲ್ಲವೂ ಸುಳ್ಳು. ನಾನು ಹೊಸ ಹೊಸ ಕೆಲಸಗಳ ಬಗ್ಗೆ ಯೋಚನೆ ಮಾಡ್ತಿದ್ದಿನಿ. ಮದುವೆ ಸಮಯ ಬಂದಾಗ ಎಲ್ಲರಿಗೂ ತಿಳಿಸ್ತಿನಿ. ಕೊರಗಜ್ಜನ ದೇವಸ್ಥಾನಕ್ಕೆ ಭೇಟಿ ಕೊಟ್ಟಿದು ಮದುವೆ ವಿಚಾರವಾಗಿ ಅಲ್ಲ. ಸ್ನೇಹಿತೆಯ ಮದುವೆಗೆ ಹೋಗಿ ಅಲ್ಲಿಂದ ದೇವರ ದರ್ಶನ ಮಾಡಿ ಬಂದೆ ಎಂದು ಹೇಳಿದ್ದಾರೆ.
ಒಂದಷ್ಟು ವರ್ಷಗಳ ಕಾಲ ಪ್ರೇಮಾ ಅವರು ನಟನೆಯಿಂದ ದೂರು ಉಳಿದುಕೊಂಡಿದ್ದರು. ಈಗ ಮತ್ತೆ ಅವರು ಚಂದನವನದಲ್ಲಿ ಸಕ್ರಿಯರಾಗಿದ್ದಾರೆ. ಪ್ರೇಮಾ ನಟಿಸಿದ ‘ವೆಡ್ಡಿಂಗ್ ಗಿಫ್ಟ್’ ಸಿನಿಮಾ ಕಳೆದ ವರ್ಷ ಬಿಡುಗಡೆ ಆಯಿತು.










