ಸಿದ್ಧಾರ್ಥ್-ಕಿಯಾರಾ ಅವರದ್ದು ನಿಜವಾದ ಪ್ರೀತಿ : ಕಂಗನಾ ರಣಾವತ್.

67
firstsuddi

ಬಾಲಿವುಡ್ ತಾರೆಗಳಾದ ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ಕಿಯಾರಾ ಅಡ್ವಾಣಿ ಅವರು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಈಗಾಗಲೇ ಇರುವ ಮಾಹಿತಿಯಂತೆ ತಾರಾ ಜೋಡಿ ಫೆಬ್ರವರಿ 6ರಂದು ಅದ್ದೂರಿಯಾಗಿ ರಾಜಸ್ಥಾನದ ಸೂರ್ಯಗಡ ಪ್ಯಾಲೇಸ್ ನಲ್ಲಿ ಹಸೆಮಣೆ ಏರಲಿದ್ದಾರೆ. ಆದರೆ ಇದುವರೆಗೆ ಈ ಜೋಡಿ ತಮ್ಮ ಮದುವೆಯ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಈ ನಡುವೆ ನಟಿ ಕಂಗನಾ ರಣಾವತ್ ಅವರು ‘ಇವರಿಬ್ಬರದ್ದು ನಿಜವಾದ ಪ್ರೀತಿ’ ಎಂದು ಹೊಗಳಿದ್ದಾರೆ.

ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ಕಿಯಾರಾ ಅಡ್ವಾಣಿ ಅವರು ಜೊತೆಯಾಗಿ ಇರುವ ಅಪರೂಪದ ವಿಡಿಯೋವನ್ನು ಕಂಗನಾ ರಣಾವತ್ ಅವರು ತಮ್ಮ ಇನ್ ಸ್ಟಾಗ್ರಾಮ್ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ‘ಈ ಜೋಡಿ ಎಷ್ಟು ಚೆನ್ನಾಗಿ ಕಾಣುತ್ತಿದೆ. ಚಿತ್ರರಂಗದಲ್ಲಿ ನಾವು ನಿಜವಾದ ಪ್ರೀತಿಯನ್ನು ನೋಡುವುದು ತುಂಬ ವಿರಳ’ ಎಂದು ಕಂಗನಾ ಅವರು ಕ್ಯಾಪ್ಷನ್ ನೀಡಿದ್ದಾರೆ. ಜೊತೆಗೆ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅವರನ್ನು ಟ್ಯಾಗ್ ಮಾಡಿದ್ದಾರೆ.

ಬಾಲಿವುಡ್ ನಿಂದ ಅಂದಾಜು 100 ಜನರು ಈ ವಿವಾಹದಲ್ಲಿ ಭಾಗಿ ಆಗುವ ಸಾಧ್ಯತೆ ಇದೆ. ಕರಣ್ ಜೋಹರ್, ಮನೀಶ್ ಮಲ್ಹೋತ್ರಾ, ಶಾಹಿದ್ ಕಪೂರ್, ರಶ್ಮಿಕಾ ಮಂದಣ್ಣ ಮುಂತಾದವರು ಭಾಗಿಯಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.