ಚಿತ್ರೀಕರಣದ ವೇಳೆ ನಟಿ ಸಮಂತಾ ಕೈಗೆ ಗಾಯ…

58
firstsuddi

ಚಿತ್ರೀಕರಣದ ವೇಳೆ ತೆಲುಗು ನಟಿ ಸಮಂತಾ ಕೈಗೆ ಗಾಯಗಳಾಗಿವೆ. ಗಾಯಗೊಂಡ ಕೈಗಳ ಚಿತ್ರವನ್ನು ಸಮಂತಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಇದು ಚಿತ್ರೀಕರಣದಲ್ಲಿ ನಡೆದ ಘಟನೆಯಿಂದ ಆದದ್ದು ಎಂದು ಬರೆದುಕೊಂಡಿದ್ದಾರೆ. ಈ ಫೋಟೋ ನೋಡಿ ಫ್ಯಾನ್ಸ್ ಗೆ ಭಯ ಆಗಿದೆ.

ಸಮಂತಾ ಸದ್ಯ ಹಿಂದಿಯಲ್ಲಿ ತಯಾರಾಗುತ್ತಿರುವ ‘ಸಿಟಾಡೆಲ್’ ವೆಬ್ ಸಿರೀಸ್ ನಲ್ಲಿ ನಟಿಸುತ್ತಿದ್ದಾರೆ. ಮೂಲ ಇದು ಇಂಗ್ಲಿಷಿನಲ್ಲಿ ಬರುತ್ತಿದ್ದು, ಅದನ್ನು ಹಿಂದಿಗೆ ರೀಮೇಕ್ ಮಾಡಲಾಗುತ್ತಿದೆ. ಹೇರಳವಾಗಿ ಆ್ಯಕ್ಷನ್ ಸನ್ನಿವೇಶಗಳು ಅದರಲ್ಲಿ ಇವೆಯಂತೆ. ಈ ವೆಬ್ ಸರಣಿಯ ಶೂಟಿಂಗ್ ವೇಳೆ ಸಮಂತಾ ಕೈಗೆ ಗಾಯಗಳಾಗಿವೆ. ಕೂಡಲೇ ಚಿಕಿತ್ಸೆ ಪಡೆದುಕೊಂಡಿರುವ ಅವರು, ನಂತರ ಮತ್ತೆ ಚಿತ್ರೀಕರಣದಲ್ಲಿ ಪಾಲ್ಗೊಂಡರು ಎಂದು ಹೇಳಲಾಗುತ್ತಿದೆ.

ಸಮಂತಾ ಅವರಿಗೆ ಆ್ಯಕ್ಷನ್ ಎಂದರೆ ಇಷ್ಟ. ಇತ್ತೀಚೆಗೆ ಈ ರೀತಿಯ ಪಾತ್ರಗಳನ್ನು ಅವರು ಹೆಚ್ಚು ಒಪ್ಪಿಕೊಳ್ಳುತ್ತಿದ್ದಾರೆ. Myositis ಸಮಸ್ಯೆಯಿಂದ ಅವರಿಗೆ ವರ್ಕೌಟ್ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಈಗ ಈ ಸಮಸ್ಯೆ ಕಡಿಮೆ ಆಗುತ್ತಿರುವುದರಿಂದ ಅವರು ಮತ್ತೆ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿದ್ದಾರೆ. ಆ್ಯಕ್ಷನ್ ಸಿನಿಮಾಗಳನ್ನೂ ಒಪ್ಪಿಕೊಂಡು ನಟಿಸುತ್ತಿದ್ದಾರೆ.