ನಟ ಅಮನ್ ಧಾಲಿವಾಲ್ ಮೇಲೆ ಮಾರಣಾಂತಿಕ ಹಲ್ಲೆ…

57
firstsuddi

ಬಾಲಿವುಡ್ ಹಾಗೂ ಪಂಜಾಬಿ ನಟ ಅಮನ್ ಧಾಲಿವಾಲ್ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಅಮನ್ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಹಲ್ಲೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅಮನ್ ಧಾಲಿವಾಲ್ ಅವರು ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿರುವಾಗ ಕಿಡಿಗೇಡಿಯೊಬ್ಬ ಒಳಗೆ ಪ್ರವೇಶಿಸಿದ್ದಾನೆ. ಕೈಯಲ್ಲಿ ಮಾರಕಾಸ್ತ್ರ ಹಿಡಿದು ಎಲ್ಲರನ್ನೂ ಬೆದರಿಸಿದ್ದಾನೆ. ಅಲ್ಲಿಯೇ ಇದ್ದ ಅಮನ್ ಗೆ ನೀರು ಕೊಡುವಂತೆ ದಬಾಯಿಸುತ್ತಾನೆ. ಅಮನ್ ಕೇರ್ ಮಾಡದೇ ಇದ್ದಾಗ ಮಚ್ಚು ತೋರಿಸಿ ಬೆದರಿಸಲು ಪ್ರಯತ್ನಿಸುತ್ತಾನೆ. ಆ ವ್ಯಕ್ತಿಯನ್ನು ಅಮನ್ ಮಣಿಸಲು ಯತ್ನಿಸುತ್ತಾರೆ. ಈ ವೇಳೆ ಮನಸ್ಸಿಗೆ ಬಂದಂತೆ ವ್ಯಕ್ತಿ ಮಚ್ಚು ಬೀಸುತ್ತಾನೆ. ಆಗ ಅವರಿಗೆ ಗಂಭೀರ ಗಾಯಗಳಾಗಿವೆ.

ಕೂಡಲೇ ಪೊಲೀಸ್ ಸಿಬ್ಬಂದಿಗೆ ಸುದ್ದಿ ಮುಟ್ಟಿಸಲಾಗುತ್ತದೆ. ಸ್ಥಳಕ್ಕೆ ಬಂದ ಪೊಲೀಸರು ಆ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಅಮನ್ ಧಾಲಿವಾಲ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.