ಝಡ್ ಪ್ಲಸ್ ಭದ್ರತೆ ಪಡೆದು ಶ್ರೀನಗರದಲ್ಲಿ ಓಡಾಟ – ನಕಲಿ ಪಿಎಂಒ ಅಧಿಕಾರಿ ಅರೆಸ್ಟ್…

53
firstsuddi

ಶ್ರೀನಗರ: ಪ್ರಧಾನಮಂತ್ರಿ ಕಾರ್ಯಾಲಯದ ಹಿರಿಯ ಅಧಿಕಾರಿ ಎಂದು ಹೇಳಿಕೊಂಡು ಜಮ್ಮು ಮತ್ತು ಕಾಶ್ಮೀರದಲ್ಲಿ ತಿರುಗಾಡುತ್ತಿದ್ದ ಗುಜರಾತ್ ನ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಕಿರಣ್ ಭಾಯ್ ಪಟೇಲ್ ಈ ವರ್ಷದ ಆರಂಭದಲ್ಲಿ ಶ್ರೀನಗರಕ್ಕೆ 2 ಬಾರಿ ಭೇಟಿ ನೀಡಿದ್ದ. ಈ ಸಂದರ್ಭದಲ್ಲಿ ಅಧಿಕಾರಿಗಳೊಂದಿಗೆ ಸರಣಿ ಸಭೆಗಳನ್ನು ನಡೆಸಿದ್ದ. ಅಷ್ಟೇ ಅಲ್ಲದೇ ಝಡ್ ಪ್ಲಸ್ ಭದ್ರತೆ, ಬುಲೆಟ್ ಪ್ರೂಫ್ ಮಹೀಂದ್ರಾ ಸ್ಕಾರ್ಪಿಯೋ ಎಸ್‍ಯುವಿ, ಪಂಚತಾರಾ ಹೋಟೆಲ್ ನಲ್ಲಿ ಅಧಿಕೃತ ವಸತಿ ಸೇರಿದಂತೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಪಡೆದುಕೊಂಡಿದ್ದ. ಅಷ್ಟೇ ಅಲ್ಲದೇ ಜಮ್ಮು ಕಾಶ್ಮೀರದ ವಿವಿಧೆಡೆಯಲ್ಲಿ ಭದ್ರತಾ ಪಡೆ ಹಾಗೂ ಪೊಲೀಸರ ಬೆಂಗಾವಲಿನಲ್ಲಿ ವಿವಿಧೆಡೆ ಸಂಚರಿಸಿದ್ದ.

ದೂಧಪತ್ರಿಯನ್ನು ಪ್ರವಾಸೋದ್ಯಮ ತಾಣವನ್ನಾಗಿ ಮಾಡುವ ಬಗ್ಗೆಯೂ ಅಧಿಕಾರಿಗಳೊಂದಿಗೆ ಚರ್ಚಿಸಿದ್ದ. ಆದರೆ ಈ ಸಂಬಂಧ ಪೊಲೀಸರು ಅನುಮಾನಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಆತನನ್ನು ಪರಿಶೀಲಿಸಿದ ಪೊಲೀಸರು ಶ್ರೀನಗರದ ಹೋಟೆಲ್ ನಲ್ಲಿ ಬಂಧಿಸಿದ್ದಾರೆ. ಕಿರಣ್ ಪಟೇಲ್ 10 ದಿನಗಳ ಹಿಂದೆಯೇ ಬಂಧಿಸಲಾಗಿದ್ದು, ಅದನ್ನು ಪೊಲೀಸರು ರಹಸ್ಯವಾಗಿಟ್ಟಿದ್ದರು. ಆದರೆ ನ್ಯಾಯಾಂಗ ಬಂಧನ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ.