ಉರಿಗೌಡ, ನಂಜೇಗೌಡ ಟಿಪ್ಪುವನ್ನ ಕೊಂದಿದ್ದು ಐತಿಹಾಸಿಕ ಸತ್ಯ : ಸಿ.ಟಿ ರವಿ

49
firstsuddi

ಹುಬ್ಬಳ್ಳಿ : ಉರಿಗೌಡ, ನಂಜೇಗೌಡ ಐತಿಹಾಸಿಕ ವ್ಯಕ್ತಿಗಳು. ಟಿಪ್ಪುವನ್ನ ಉರಿಗೌಡ, ನಂಜೇಗೌಡ ಕೊಂದಿದ್ದು ಐತಿಹಾಸಿಕ ಸತ್ಯ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಹೇಳಿದ್ದಾರೆ.

ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಟಿಪ್ಪು ಹಾಸನಕ್ಕೆ ಇಟ್ಟ ಹೆಸರು ಕೈಮಾಬಾದ್, ಟಿಪ್ಪು ಸುಲ್ತಾನ್ ಬದುಕಿದ್ರೆ ಯಾರ ಯಾರ ಕಥೆ ಏನಾಗ್ತಿತ್ತೋ ಗೊತ್ತಿಲ್ಲ. ಕುಮಾರಸ್ವಾಮಿಗೆ ಹಾಸನವನ್ನ ಆ ರೀತಿಯಲ್ಲಿ ಕರೆಸಿಕೊಳ್ಳೋಕೆ ಇಷ್ಟ ಇತ್ತು ಅನ್ನಿಸುತ್ತೆ ಎಂದರು.

ರಾಜ್ಯದ 140ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರದಲ್ಲಿ ರಥಯಾತ್ರೆ ಮಾಡಿದ್ದೇವೆ, ವಿಜಯಸಂಕಲ್ಪ ಯಾತ್ರೆಯಲ್ಲಿ ಅಭೂತಪೂರ್ವ ಜನಬೆಂಬಲ ಸಿಕ್ಕಿದೆ. ಬಿಜೆಪಿ ಅತಿ ಹೆಚ್ಚು ಸೀಟ್ ಗೆದ್ದು ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುತ್ತೆ, ಕೆಲವರಿಗೆ ವೋಟ್ ಮೊದಲು ಆದರೆ ನಮಗೆ ರಾಷ್ಟ್ರ ಮೊದಲು ಎಂದು ಹೇಳಿದ್ದಾರೆ.

ನಾವು ಸರ್ಕಾರದ ಅಭಿವೃದ್ಧಿ ರಿಪೋರ್ಟ್ ಕಾರ್ಡ್ ಜನರ ಮುಂದೆ ಇಟ್ಟಿದ್ದೇವೆ. ಜೊತೆಗೆ ಪಕ್ಷದ ಸಿದ್ಧಾಂತ ಮತ್ತು ಬದ್ಧತೆ ಮುಂದಿಟ್ಟು ಬಹುಮತ ಕೇಳ್ತಿದ್ದೇವೆ. ನಾವು ಯಾವುದೇ ಜಾತಿ ತಾರತಮ್ಯ ಮಾಡದೆ ಯೋಜನೆ ತಲುಪಿಸಿದ್ದೇವೆ. ಯಾವತ್ತೋ ಸಾಲ ಮನ್ನಾ ಮಾಡಿರೋದನ್ನೆ ಇಂದಿಗೂ ಕೆಲವರು ಹೇಳುತ್ತಿದ್ದಾರೆ ಎಂದು ಸಿ.ಟಿ ರವಿ ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದ್ದಾರೆ.