ಚಿತ್ರೀಕರಣ ವೇಳೆ ಅವಘಡ – ಸಂಜಯ್ ದತ್ ಗೆ ಗಾಯ…

58
firstsuddi

ಬಾಲಿವುಡ್ ನಟ ಸಂಜಯ್ ದತ್ ಕನ್ನಡದ ಪ್ಯಾನ್-ಇಂಡಿಯಾ ಸಿನಿಮಾ ‘ಕೆಡಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ವೇಳೆ ಸಂಜಯ್ ದತ್ ಬಾಂಬ್ ಸ್ಫೋಟ ಮಾಡುವಾಗ ಗಾಯ ಮಾಡಿಕೊಂಡಿದ್ದಾರೆ. ಎನ್ನುವ ಮಾಹಿತಿ ಇದೆ.

ಬೆಂಗಳೂರಿನ ಮಾಗಡಿ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಫೈಟ್ ಮಾಸ್ಟರ್ ಡಾ. ರವಿವರ್ಮ ಚಿತ್ರಕ್ಕೆ ಫೈಟ್ ಕಂಪೋಸ್ ಮಾಡುತ್ತಿದ್ದರು. ಸಂಜಯ್ ಮತ್ತು ಧ್ರುವ ನಡುವೆ ಸಾಹಸ ಸನ್ನಿವೇಶದ ಚಿತ್ರೀಕರಣವನ್ನು ನಿರ್ದೇಶಕರು ಸೆರೆ ಹಿಡಿಯುತ್ತಿದ್ದರು . ಬಾಂಬ್ ಸ್ಫೋಟದ ದೃಶ್ಯವನ್ನು ಚಿತ್ರೀಕರಿಸುವಾಗ ಸಂಜಯ್ ದತ್ ಅವರ ಮೊಣಕೈ ಹಾಗೂ ಮುಖಕ್ಕೆ ಗಾಯವಾಗಿದೆ ಇದರಿಂದ ಸಂಜಯ್ ದತ್ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಘಟನೆ ನಂತರ ಶೂಟಿಂಗ್ ನಿಲ್ಲಿಸಲಾಗಿದೆ ಎಂದು ಚಿತ್ರರಂಗದ ಮೂಲಗಳು ವಿವರಿಸಿವೆ.

ಧ್ರುವ ಸರ್ಜಾ ಮತ್ತು ಜೋಗಿ ಪ್ರೇಮ್ ಕಾಂಬಿನೇಷನ್ ಸಿನಿಮಾ ಇದಾಗಿದ್ದು, ಸಂಜಯ್ ದತ್ ಅವರು ಖಳನಾಯಕನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಚಿತ್ರದಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.