ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಉತ್ತರಾ ಬಾಕರ್ ನಿಧನ…

61
firstsuddi

ಹಿಂದಿ ಮತ್ತು ಮರಾಠಿ ಭಾಷೆಯ ಹಿರಿಯ ನಟಿ ಮತ್ತು ರಂಗಭೂಮಿ ಕಲಾವಿದೆ ಉತ್ತರಾ ಬಾಕರ್ (79) ಅವರು ಮಂಗಳವಾರ ನಿಧನರಾಗಿದ್ದಾರೆ.

ಕಳೆದ ಒಂದು ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದ, ನಟಿ ಉತ್ತರಾ ಪುಣೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. ಅಂತ್ಯಸಂಸ್ಕಾರವನ್ನು ನಿನ್ನೆ ಬೆಳಿಗ್ಗೆ ಪುಣೆಯಲ್ಲಿ ನೆರವೇರಿಸಲಾಗಿದೆ.

ಮುಖ್ಯಮಂತ್ರಿಯಲ್ಲಿ ಪದ್ಮಾವತಿ, ಮೀನಾ ಗರ್ಜರಿಯಲ್ಲಿ ಮೀನಾ ಪಾತ್ರ, ಶೇಕ್ಸ್ ಪಿಯರ್ ನ ಒಥೆಲೋದಲ್ಲಿ ಡೆಸ್ಡೆಮೋನಾ ಮತ್ತು ಗಿರೀಶ್ ಕಾರ್ನಾಡ್ ಅವರ ತುಘಲಕ್‌ನಲ್ಲಿ ತಾಯಿ ಪಾತ್ರ ಸೇರಿದಂತೆ ಹಲವು ನಾಟಕಗಳಲ್ಲಿ ಉತ್ತರಾ ಬಾಕರ್ ನಟಿಸಿದ್ದಾರೆ. ‘ಏಕ್ ದಿನ್ ಅಚಾನಕ್’ ಚಿತ್ರದಲ್ಲಿನ ನಟನೆಗಾಗಿ 1988ರಲ್ಲಿ ಅತ್ಯುತ್ತಮ ಪೋಷಕ ನಟಿ ರಾಷ್ಟ್ರ ಪ್ರಶಸ್ತಿ ಕೊಟ್ಟು ಗೌರವಿಸಲಾಗಿತ್ತು.