ಮಲಯಾಳಂ ಖ್ಯಾತ ಹಾಸ್ಯನಟ ಮಾಮುಕೋಯ ಇನ್ನಿಲ್ಲ!

58
firstsuddi

ಮಲಯಾಳಂ ಚಿತ್ರರಂಗದ ಖ್ಯಾತ ಹಾಸ್ಯನಟ ಮಾಮುಕೋಯ ಅವರು ಇಂದು ನಿಧನರಾಗಿದ್ದಾರೆ.

ಸೋಮವಾರ ಕಾಳಿಕಾವುನಲ್ಲಿ ನಡೆಯುತ್ತಿದ್ದ ಫುಟ್‌ಬಾಲ್ ಪಂದ್ಯಾವಳಿಯ ವೇಳೆ ಮಾಮುಕೋಯ ಕುಸಿದು ಬಿದ್ದಿದ್ದರು. ಕೂಡಲೇ ಅವರನ್ನು ವಂಡೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅವರ ಆರೋಗ್ಯದ ಗಂಭೀರತೆಯನ್ನು ಅರಿತು ಕೋಝಿಕೋಡ್ ನಲ್ಲಿನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಿ ನಿನ್ನೆಯಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಹೃದಯಾಘಾತದಿಂದಾಗಿ ನಿಧನರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಮಲಯಾಳಂ ಸಿನಿಮಾ ರಂಗದ ಹೆಸರಾಂತ ಹಾಸ್ಯ ಕಲಾವಿದರಾಗಿದ್ದ ಮಾಮುಕೋಯ ಈವರೆಗೂ 450ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಗಲಿದ ಹಿರಿಯ ನಟನ ಆತ್ಮಕ್ಕೆ ಮಲಯಾಳಂ ಸಿನಿಮಾ ರಂಗ ಕಂಬನಿ ಮಿಡಿದಿದೆ.