ಊಟದ ಮೆನುವಿನಲ್ಲಿ ಮಟನ್ ಕರ್ರಿ ಸೇರಿಸಿಲ್ಲವೆಂದು ಮದುವೆಯನ್ನೇ ಕ್ಯಾನ್ಸಲ್ ಮಾಡಿದ ವರ…

59
firstsuddi

ಹೈದರಾಬಾದ್: ವಧುವಿನ ಕಡೆಯವರು ಊಟದ ಮೆನುವಿನಲ್ಲಿ ಮಟನ್ ಬೋನ್ ಮ್ಯಾರೋ ಸೇರಿಸಿಲ್ಲವೆಂದು ವರನ ಕಡೆಯವರು ಮದುವೆಯನ್ನೇ ಕ್ಯಾನ್ಸಲ್ ಮಾಡಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

ನಿಜಾಮಾಬಾದ್‍ನ ವಧು ಹಾಗೂ ಜಗ್ತಿಯಾಳ್ ಮೂಲದ ವರನಿಗೂ ಮದುವೆ ನಿಶ್ಚಯವಾಗಿತ್ತು. ನಿಶ್ಚಿತಾರ್ಥದ ಬಳಿಕ ವಧುವಿನ ಮನೆಯವರು ತಮ್ಮ ಕುಟುಂಬ ಸದಸ್ಯರು ಮತ್ತು ವರನ ಸಂಬಂಧಿಕರು ಸೇರಿದಂತೆ ಅತಿಥಿಗಳಿಗಾಗಿ ಮಾಂಸಾಹಾರಿ ಮೆನುವನ್ನು ಏರ್ಪಡಿಸಿದ್ದರು.

ಇನ್ನೂ ಊಟದ ವೇಳೆ ಅತಿಥಿಗಳಾಗಿ ಬಂದಿರುವ ಹುಡುಗನ ಕುಟುಂಬಸ್ಥರಿಗೆ ಮೊದಲು ವಿವಿಧ ಬಗೆಯ ಅಡುಗೆ ಖಾದ್ಯಗಳನ್ನು ಬಡಿಸಲಾಗಿತ್ತು. ಆದರೆ ಮಟನ್ ಸಾರು ಬಡಿಸಿಲ್ಲ ಎಂದು ಹುಡುಗನ ಕುಟಂಬಸ್ಥರು ರಂಪಾಟ ಮಾಡಿದ್ದಾರೆ. ಮಟನ್ ಸಾರು ಮಾಡುವ ಕುರಿತು ನಾವು ಚರ್ಚಿಸಿಲ್ಲ, ಹೀಗಾಗಿ ಮಾಡಿಲ್ಲ. ಎಲ್ಲರೂ ಊಟ ಮಾಡಬೇಕು ಎಂದು ಹುಡುಗಿ ಪೋಷಕರು ಮನವಿ ಮಾಡಿದ್ದಾರೆ. ಆದರೆ ಕುಟುಂಬಸ್ಥರ ಜೊತೆಗೆ ಹುಡುಗನೂ ಕೂಡ ಜಗಳ ಆರಂಭಿಸಿದ್ದಾನೆ.

ಜಗಳ ಜೋರಾಗುತ್ತಿದ್ದಂತೆ ಪೊಲೀಸರು ಆಗಮಿಸಿ ಸಮಾಧಾನ ಮಾಡುವ ಕೆಲಸ ಮಾಡಿದ್ದಾರೆ. ಆದರೆ ವರನ ಕುಟುಂಬಕ್ಕೆ ಪೊಲೀಸರ ಆಗಮನ ಮತ್ತಷ್ಟು ಕೆರಳುವಂತೆ ಮಾಡಿದೆ. ಇದರ ಬೆನ್ನಲ್ಲೇ ವರನ ಕುಟುಂಬಸ್ಥರು ಮದುವೆ ರದ್ದು ಮಾಡಿದ್ದಾರೆ.