ಬೆಂಗಳೂರು: ಓಯೋ ಹೋಟೆಲ್‌ನಲ್ಲಿ ರೌಡಿಶೀಟರ್, ಸುಪಾರಿ ಕಿಲ್ಲರ್ ಬರ್ಬರ ಕೊಲೆ…

38
firstsuddi

ಬೆಂಗಳೂರು: ರೌಡಿಶೀಟರ್ ಹಾಗೂ ಸುಪಾರಿ ಕಿಲ್ಲರ್​ನನ್ನು ನಗರದ ಕಮ್ಮನಹಳ್ಳಿಯ ಓಯೋ ಹೋಟೆಲ್‌ನಲ್ಲಿ ಇಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ದಿನೇಶ್ ಮೃತ ರೌಡಿಶೀಟರ್. ಕಮ್ಮನಹಳ್ಳಿಯ ಓಯೋ ಹೋಟೆಲ್ ರೂಂನಲ್ಲಿ ಸ್ನೇಹಿತರ ಜೊತೆ ರೌಡಿಶೀಟರ್ ದಿನೇಶ್ ತಂಗಿದ್ದನು. ಆದರೆ ರೂಂನ ಬಿಲ್ ಕೊಡುವ ವಿಚಾರದಲ್ಲಿ ಜಗಳವಾಗಿ ಏಳು ಮಂದಿ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.