ಮಂಡ್ಯ: ಮಂಡ್ಯ ಲೋಕಸಭಾ ಅಖಾಡ ರಂಗೇರಿದ್ದು, ಮಂಡ್ಯ ಮೈತ್ರಿ ಅಭ್ಯರ್ಥಿ ಹೆಚ್.ಡಿ ಕುಮಾರಸ್ವಾಮಿ ಅವರು ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ.
ಈ ವೇಳೆ ಹೆಚ್‌ಡಿಕೆ ಅಭಿಮಾನಿ ಹಾಗೂ ಜೆಡಿಎಸ್ ಕಾರ್ಯಕರ್ತ ಹನಕೆರೆ ಗ್ರಾಮದ ಜೋಗಪ್ಪ ಎಂಬಾತ ಕುಮಾರಸ್ವಾಮಿಗೆ ಚುನಾವಣಾ ಖರ್ಚಿಗೆ 500 ರೂ ಕೊಟ್ಟು ಕೇಂದ್ರ ಸಚಿವರಾಗುವಂತೆ ಆಶೀರ್ವದಿಸಿದ್ದಾರೆ.
ಮಂಡ್ಯದ ಖಾಸಗಿ ಹೋಟೆಲ್‌ಗೆ ಹೆಚ್‌ಡಿಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಅವರ ಕಾಲಿಗೆ ಬಿದ್ದು ಜೋಗಪ್ಪ ಹಣ ನೀಡಿದ್ದಾನೆ. ‘ನೀವು ಕ್ಯಾಬಿನೆಟ್ ಮಿನಿಸ್ಟರ್ ಆಗಬೇಕು’ ಎಂದು ಹೆಚ್‌ಡಿಕೆಗೆ ಅಭಿಮಾನಿ ಆಶೀರ್ವದಿಸಿದ್ದಾರೆ.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕಣವು ಗಮನ ಸೆಳೆದಿದೆ. ಮೈತ್ರಿ ಅಭ್ಯರ್ಥಿಯಾಗಿ ಹೆಚ್.ಡಿ.ಕುಮಾರಸ್ವಾಮಿ ಕಣಕ್ಕಿಳಿದಿದ್ದಾರೆ. ಇವರ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಟಾರ್ ಚಂದ್ರು ಸ್ಪರ್ಧಿಸಿದ್ದಾರೆ.










