ಸರ್ಕಾರಿ ಆಸ್ಪತ್ರೆಯಿಂದ ಸಿಸಿಟಿವಿಗಳ ಡಿವಿಆರ್ ಸಮೇತ ಲಕ್ಷಾಂತರ ರೂ. ಮೌಲ್ಯದ ಉಪಕರಣ ಕಳವು.

28

ರಾಯಚೂರು: ರಾಯಚೂರಿನ ಸರ್ಕಾರಿ ಆಸ್ಪತ್ರೆಯಲ್ಲೇ ಕಳ್ಳತನವಾಗಿದೆ. ಜಿಲ್ಲೆಯ ದೇವದುರ್ಗ ತಾಲೂಕು ಆಸ್ಪತ್ರೆಯ ಸಿಸಿಟಿವಿಗಳ ಡಿವಿಆರ್ ಸಮೇತ ಲ್ಯಾಬ್‍ನಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಉಪಕರಣಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಸುಮಾರು ಹತ್ತು ಲಕ್ಷ ರೂಪಾಯಿ ಮೌಲ್ಯದ ಮೂರು ಯಂತ್ರೋಪಕರಣಗಳು ಕಳವಾಗಿವೆ. ರಕ್ತ ಪರೀಕ್ಷೆ ಮಾಡುವ ಅತ್ಯಾಧುನಿಕ ಯಂತ್ರ, ಎಲೆಕ್ಟ್ರೋಲೈಟ್ ಸೇರಿದಂತೆ ಬೆಲೆ ಬಾಳುವ ವಸ್ತುಗಳು ಕಳವಾಗಿವೆ. ಐದು ಲಕ್ಷ ರೂಪಾಯಿ ಮೌಲ್ಯದ ಎಜಿಡಿ ಫುಲಿ ಆಟೋಮೇಟೆಡ್ ಅನಲೈಸರ್, ಐದು ಲಕ್ಷ ಮೌಲ್ಯದ ಹೆಮೆಟಲಜಿ (ರಕ್ತಶಾಸ್ತ್ರ) ಅನಲೈಸರ್, 59 ಸಾವಿರ ಮೌಲ್ಯದ ಎಲೆಕ್ಟ್ರೋಲೈಟ್ ಕಳವಾಗಿವೆ. ಒಟ್ಟಾರೆಯಾಗಿ 10.59 ಲಕ್ಷ ರೂ. ಮೌಲ್ಯದ ಯಂತ್ರೋಪಕರಣಗಳ ಕಳ್ಳತನವಾಗಿದೆ. ಆಗಂತುಕರು ಪ್ರಯೋಗಾಲಯದ ಬೀಗ ಮುರಿದು ಕೃತ್ಯ ಎಸಗಿದ್ದಾರೆ, ಯಂತ್ರೋಪಕರಣಗಳ ಕಳ್ಳತನದ ಬಳಿಕ, ಸುಳಿಸುವ ಸಿಗದಂತೆ ಮಾಡಲು ಸಿಸಿಟಿವಿ ಡಿವಿಆರ್ ಅನ್ನೂಬ ಕಳ್ಳರು ಹೊತ್ತೊಯ್ದಿದ್ದಾರೆ.