ರಷ್ಯಾ-ಉಕ್ರೇನ್ ಯುದ್ಧ ಅಂತ್ಯಗೊಳಿಸುವ ಕಡೆಗೆ ಗಮನಹರಿಸುತ್ತೇವೆ: ಡೊನಾಲ್ಡ್ ಟ್ರಂಪ್.

21

ವಾಷಿಂಗ್ಟನ್: ರಷ್ಯಾ-ಉಕ್ರೇನ್ ಯುದ್ಧ ಅಂತ್ಯಗೊಳಿಸುವ ಕಡೆಗೆ ಗಮನಹರಿಸುತ್ತೇವೆ: ಡೊನಾಲ್ಡ್ ಟ್ರಂಪ್.-ಉಕ್ರೇನ್ ಯುದ್ಧವನ್ನು ಕೊನೆಗೊಳಿಸುವ ಕಡೆಗೆ ತಮ್ಮ ಆಡಳಿತವು ಗಮನಹರಿಸಲಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ, ಕಳೆದ 2 ವರ್ಷಗಳಿಂದ ಸಂಘರ್ಷದಲ್ಲಿ ಜನರ ಹತ್ಯೆಗೆ ವಿಷಾದ ವ್ಯಕ್ತಪಡಿಸಿದ್ದಾರೆ. ನಮ್ಮ ಸರ್ಕಾರದ ಆಡಳಿತವು ಪಶ್ಚಿಮ ಏಷ್ಯಾದಲ್ಲಿ ಶಾಂತಿಯನ್ನು ತರಲು ಸಹ ಕೆಲಸ ಮಾಡುತ್ತದೆ. ಮಧ್ಯಪ್ರಾಚ್ಯದಲ್ಲಿ ವಿಚಾರದ ಬಗ್ಗೆ ಗಮನಹರಿಸಿ ರಷ್ಯಾ-ಉಕ್ರೇನ್ ಯುದ್ಧ ಕೊನೆಗಾಣಿಸುವತ್ತ ಪ್ರಯತ್ನಿಸಲಿದ್ದೇವೆ, ಯುದ್ಧ ನಿಲ್ಲಬೇಕಾಗಿದೆ ಎಂದು ಟ್ರಂಪ್ ಅವರ ಮಾರ್-ಎ-ನಲ್ಲಿ ನಡೆದ ಅಮೇರಿಕಾ ಫಸ್ಟ್ ಪಾಲಿಸಿ ಇನ್‍ಸ್ಟಿಟ್ಯೂಟ್‍ನ ಗಾಲಾ ಕಾರ್ಯಕ್ರಮದಲ್ಲಿ ಹೇಳಿದರು. ಮಾರ್-ಎ-ಲಾಗೊ ಕಾರ್ಯಕ್ರಮದಲ್ಲಿ ಟ್ರಂಪ್‍ರ ಕೆಲವು ಉನ್ನತ ಸಲಹೆಗಾರರು ಉಪಸ್ಥಿತರಿದ್ದರು. ಅವರು ಟೆಸ್ಲಾ ಮಾಲೀಕ ಎಲೋನ್ ಮಸ್ಕ್ ಮತ್ತು ಭಾರತೀಯ-ಅಮೆರಿಕನ್ ವಾಣಿಜ್ಯೋದ್ಯಮಿ ವಿವೇಕ್ ರಾಮಸ್ವಾಮಿ ಅವರನ್ನು ಶ್ಲಾಘಿಸಿದರು, ತಮ್ಮ ಎರಡನೇ ಅವಧಿಯಲ್ಲಿ ಸರ್ಕಾರದ ದಕ್ಷತೆಯ ಇಲಾಖೆಯನ್ನು  ಮುನ್ನಡೆಸಲು ಆಯ್ಕೆಯಾಗಿದ್ದಾರೆ.