ಬೆಂಗಳೂರು: ಶ್ರೀಮುರುಳಿ, ರುಕ್ಮಿಣಿ ವಸಂತ್ ನಟನೆಯ ಕನ್ನಡ ಸಿನಿಮಾ ಬಘೀರ ಇಂದಿನಿಂದ ಒಟಿಟಿ ವೇದಿಕೆಗಳಲ್ಲಿ ಬಿಡುಗಡೆಯಾಗುತ್ತಿದೆ. ಪ್ರಶಾಂತ್ ನೀಲ್ ಬಘೀರ ಸಿನಿಮಾಗೆ ಕಥೆ ಬರೆದಿದ್ದು, ಡಾ.ಸೂರಿ ನಿರ್ದೇಶನ ಮಾಡಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಬಘೀರ ಸಿನಿಮಾವನ್ನು ನಿರ್ಮಾಣ ಮಾಡಿದೆ. ಥಿಯೇಟರ್ ಗಳಲ್ಲಿ ಬಘೀರಾ ಸಿನಿಮಾ ಅಕ್ಟೋಬರ್ 31 ರಂದು ಬಿಡುಗಡೆಯಾಗಿತ್ತು. ಒಟಿಟಿ ವೇದಿಕೆಗಳಲ್ಲಿ ಬಘೀರ ಕನ್ನಡ, ತಮಿಳು, ತೆಲುಗು, ಮಲಯಾಳಂ, ತುಳು ಭಾಷೆಯಗಳಲ್ಲಿ ಲಭ್ಯವಿರಲಿದ್ದು, ಇಂಗ್ಲೀಷ್ ಸಬ್ ಟೈಟಲ್ ಗಳಿರಲಿವೆ. ಎಜೆ ಶೆಟ್ಟಿ ಸಿನಿಮೆಟಾಗ್ರಫಿ ಬಘೀರಾ ಸಿನಿಮಾಗೆ ಇದ್ದು, ಅಂಜನೀಶ್ ಬಿ ಲೋಕನಾಥ್ ಸಂಗೀತ ನೀಡಿದ್ದಾರೆ.










