ಹೊಸ ವರ್ಷದ ಸಂಭ್ರಮದಲ್ಲಿದ್ದ ಜನರ ಮೇಲೆ ನುಗ್ಗಿದ ವಾಹನ.

25

ಅಮೆರಿಕ: ಇಲ್ಲಿನ ಬೌರ್ಬನ್ ರಸ್ತೆಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿದ್ದ ಜನರ ಗುಂಪಿನ ಮೇಲೆ ಟ್ರಕ್ ಹರಿದು 10 ಮಂದಿ ಮೃತಪಟ್ಟಿದ್ದಾರೆ. 30ಕ್ಕೂ ಹೆಚ್ಚಿನ ಜನ ಗಾಯಗೊಂಡಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮ ವಾಹಿನಿ ಸಿಎನ್‍ಎನ್ ವರದಿ ಮಾಡಿದೆ. ಜನರ ಮೇಲೆ ಹರಿದ ವಾಹನದ ಮೇಲೆ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಸಂಘಟನೆಯ ಧ್ವಜ ಕಂಡುಬಂದಿದ್ದು, ಎಫ್‍ಬಿಐ ವಿಚಾರಣೆ ಚುರುಕಿನಿಂದ ಶುರುಮಾಡಿದೆ. ಘಟನೆಯ ಹಿಂದೆ ಯಾವುದಾದರೂ ಭಯೋತ್ಪಾದಕ ಗುಂಪಿನ ಕೈವಾಡ ಏನಾದರು ಇದೆಯೇ ಎಂಬುದನ್ನು ಕುರಿತು ತನಿಖೆ ತೀವ್ರಗೊಳಿಸಿದೆ. ಇದುವರೆಗೂ ಯಾವುದೇ ಸಂಘಟನೆ ದಾಳಿಯ ಹೊಣೆ ಹೊತ್ತಿಲ್ಲ. ಸುಧಾರಿತ ಸಾಧನ, ಕಂಟ್ರಿ ಬಾಂಬ್‍ಗಳು ವಾಹನದಲ್ಲಿ ಪತ್ತೆಯಾಗಿವೆ ಎಂದು ತಿಳಿಸಿದ್ದಾರೆ. ವಾಹನದಲ್ಲಿ ಚಾಲಕ ಮಾತ್ರ ಇದ್ದ ಎಂದು ಎಫ್‍ಬಿಐ ವರದಿ ನೀಡಿದ್ದಾರೆ. ಫ್ರೆಂಚ್ ಕ್ವಾರ್ಟನ್‍ನ ಆರ್ಲಿನ್ಸ್‍ನ ಐತಿಹಾಸಿಕ ಕೇಂದ್ರದ ಸಮೀಪ 2025ರ ಹೊಸ ವರ್ಷ ಸಂಭ್ರಮದ ಆಚರಣೆಯಲ್ಲಿದ್ದ ಸಂದರ್ಭದಲ್ಲಿ ಬೆಳಗಿನ ಜಾವ ಸುಮಾರು ಮೂರು ಗಂಟೆಗೆ ಈ ಘಟನೆ ಸಂಭವಿಸಿದೆ. ಓಪನ್ ಏರ್ ಕನ್ಸರ್ಟ್‍ನಲ್ಲಿ ಸೇರಿದ್ದ ಮಂದಿಯ ಮೇಲೆ ವಾಹನ ಹರಿದಿದೆ. ಆಲ್‍ಸ್ಟೇಟ್ ಶುಗರ್ ಬೌಲ್‍ಗಾಗಿ ನಗರಕ್ಕೆ ಬರುತ್ತಿದ್ದ ಕಾಲೇಜು ಫುಟ್‍ಬಾಲ್ ಅಭಿಮಾನಿಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ತಿಳಿಸಲಾಗಿದೆ. ಶುಗರ್ ಬೌಲ್ ಅಮೆರಿಕದೆಲ್ಲೆಡೆ ನಡೆಯುವ ವಾರ್ಷಿಕ ಕಾಲೇಜು ಫುಟ್ಬಾಲ್ ಆಟವಾಗಿದೆ.