ಮೂಡಿಗೆರೆ: ರೋಟರಿ ಕ್ಲಬ್ ಆಫ್ ಮೂಡಿಗೆರೆ ವತಿಯಿಂದ ಸ.ಪ.ಪೂ. ಕಾಲೇಜಿನಲ್ಲಿ “ಮಾದಕ ದ್ರವ್ಯ ವ್ಯಸನ ಮುಕ್ತಿ ಮತ್ತು ನಿರ್ಮೂಲನೆ” ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು.
ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಪೊಲೀಸ್ ಠಾಣಾಧಿಕಾರಿ ಹರ್ಷವರ್ಧನ್ ಮಾತನಾಡಿ, ಮಾದಕ ದ್ರವ್ಯಗಳ ದುಷ್ಪರಿಣಾಮಗಳು ಹಾಗೂ ಅವುಗಳಿಂದ ಎದುರಾಗುವ ಕಾನೂನು ತೊಂದರೆಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. “ನೋಡು ಬೇಡ, ಬ್ರೋ ಬೇಡ” ಎಂಬ ಸಂದೇಶದೊಂದಿಗೆ ಮಾದಕ ವ್ಯಸನದಿಂದ ದೂರವಿರುವಂತೆ ಕರೆ ನೀಡಿದರು.
ಕಾಲೇಜಿನ ಪ್ರಾಂಶುಪಾಲರು ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣಕ್ಕೆ ಆದ್ಯತೆ ನೀಡಿ, ಯಾವುದೇ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗದೆ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ರೋಟರಿ ಕ್ಲಬ್ ಅಧ್ಯಕ್ಷ RTN ಬಿ.ಕೆ. ದಿನೇಶ್ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಜಿಲ್ಲಾ ಫಾಸ್ಟ್ AG ವಿನೋದ್ ಕುಮಾರ್ ಶೆಟ್ಟಿ, RTN H.K. ಯೋಗೇಶ್, RTN ಆದರ್ಶ್, RTN ದೀಪಕ್ ದೊಡಯ್ಯ, ಕಾರ್ಯದರ್ಶಿ ಸಂತೋಷ್ ಸೇರಿದಂತೆ ಹಲವು ರೋಟರಿಯನ್ಸ್ ಉಪಸ್ಥಿತರಿದ್ದರು.
ಅಪೂರ್ವ ಪ್ರಾರ್ಥಿಸಿದರು. ಬಿಂದು ಲೋಕೇಶ್ ಸ್ವಾಗತಿಸಿದರು. ಕನ್ನಡ ಉಪನ್ಯಾಸಕ ಪ್ರಸಾದ್ ಬಕ್ಕಿ ನಿರೂಪಿಸಿದರು. ಅನುಷಾ ವಂದಿಸಿದರು.










