ಕಳಸ:ಅರವತ್ತು ದಿನಗಳ ಹಿಂದೆ ಕಾಣೆಯಾಗಿದ್ದ ವ್ಯಕ್ತಿಯ ಶವ ಭದ್ರಾ ನದಿಯ ದಡದಲ್ಲಿ ಪತ್ತೆ…

521
firstsuddi

ಕಳಸ:ಕಳೆದ ಅರವತ್ತು ದಿನಗಳ ಹಿಂದೆ ಕಾಣೆಯಾಗಿದ್ದ ಕಾಂತಪ್ಪ ಪೂಜಾರಿ(85)ಇವರ ಮೃತದೇಹ ಗುರುವಾರ ಭದ್ರಾ ನದಿಯ ದಡದಲ್ಲಿ ಪತ್ತೆಯಾಗಿದೆ.ಇಲ್ಲಿಯ ಕಳಕ್ಕೋಡು ನಿವಾಸಿ ಕಾಂತಪ್ಪ ಪೂಜಾರಿ ಆಗಸ್ಟ್ 4ನೇ ತಾರಿಕಿನ ಸಂಜೆ 5 ಗಂಟೆಗೆ ಕಳಸ ಕಡೆ ಬಂದವರು ನಂತರ ಕಾಣೆಯಾಗಿದ್ದರು.ಈ ಬಗ್ಗೆ ಕಳಸ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು.ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಯಿಂದ ಭದ್ರಾ ನದಿಯಲ್ಲಿ ಕೊಚ್ಚಿಕೊಂಡು ಹೋಗಿರಬಹುದೆಂದು ಶಂಕೆ ವ್ಯಕ್ತಪಡಿಸಲಾಗಿತ್ತು. ಈ ಬಗ್ಗೆ ಅದೆಷ್ಟು ಹುಡುಕಾಡಿದರೂ ಕೂಡ ಕಾಣೆಯಾಗಿರುವ ವ್ಯಕ್ತಿ ಸಿಕ್ಕಿರಲಿಲ್ಲ.ನಂತರ ಹುಡುಕುವ ಪ್ರಯತ್ನವನ್ನು ಕೈಬಿಡಲಾಗಿತ್ತು.ಆದರೆ ಗುರುವಾರ ಭದ್ರಾ ನದಿಯ ಕೋಡಿ ಬೆಟ್ಟ ಎಂಬ ಪ್ರದೇಶದಲ್ಲಿ ವಾಸನೆ ಬರುತ್ತಿದ್ದನ್ನು ಗಮನಿಸಿದ ಸ್ಥಳಿಯರು ಕಳಸ ಪೊಲೀಸ್ ಠಾಣೆಗೆ ಸುದ್ಧಿ ಮುಟ್ಟಿಸಿದ್ದರು.ಪೊಲೀಸರು ಕಾಣೆಯಾಗಿದ್ದವರ ಕುಟುಂಬಸ್ಥರನ್ನು ಕರೆಸಿ ಪರಿಶೀಲನೆ ನಡೆಸಿ.ಸ್ಥಳದಲ್ಲಿದ್ದ ಬಟ್ಟೆಯ ಆದಾರದ ಮೇಲೆ ಕಾಣೆಯಾಗಿದ್ದ ವ್ಯಕ್ತಿಯ ಮೃತದೇಹ ಎಂದು ದೃಡಪಡಿಸಲಾಗಿದೆ.ಮೃತದೇಹವನ್ನು ಕಳಸ ಸಮುದಾಯ ಆರೋಗ್ಯ ಕೇಂದ್ರಕ್ಕೆ ತಂದು ಮರಣೋತ್ತರ ಪರೀಕ್ಷೆ ನಡೆಸಿ ವಾರಿಸುದಾರರಿಗೆ ಬಿಟ್ಟುಕೊಡಲಾಯಿತು.